Asianet Suvarna News Asianet Suvarna News

‘ಹಿಟ್‌ಲಿಸ್ಟ್‌’ ದೂರುದಾರ ವಿನೋದ್ ನಾಯಕ್ ಒಬ್ಬ ಫ್ರಾಡ್! ಎಂ.ಬಿ. ಪಾಟೀಲ್ ಖಡಕ್ ಮಾತು

ಮಾಜಿ ಗೃಹಸಚಿವ ಎಂ.ಬಿ. ಪಾಟೀಲ್ ತನ್ನ ರಾಜಕೀಯ ಎದುರಾಳಿಗಳನ್ನು ಸದೆಬಡಿಯಲು ಹಿಟ್ ಲಿಸ್ಟ್ ಮಾಡಿಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಅದಕ್ಕೆ  ಖುದ್ದು ಪ್ರತಿಕ್ರಿಯೆ ನೀಡಿರುವ ಎಂ.ಬಿ. ಪಾಟೀಲ್, ಆರೋಪಗಳನ್ನು ತಳ್ಳಿಹಾಕಿದರು. ದೂರುದಾರ ವಿನೋದ್ ನಾಯಕ್ ಒಬ್ಬ ಮೋಸಗಾರ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರು (ನ.06): ಮಾಜಿ ಗೃಹಸಚಿವ ಎಂ.ಬಿ.ಪಾಟೀಲ್ ತನ್ನ ರಾಜಕೀಯ ಎದುರಾಳಿಗಳನ್ನು ಸದೆಬಡಿಯಲು ಹಿಟ್ ಲಿಸ್ಟ್ ಮಾಡಿಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. 

ಅದಕ್ಕೆ  ಖುದ್ದು ಪ್ರತಿಕ್ರಿಯೆ ನೀಡಿರುವ ಎಂ.ಬಿ. ಪಾಟೀಲ್, ಆರೋಪಗಳನ್ನು ತಳ್ಳಿಹಾಕಿದರು. ದೂರುದಾರ ವಿನೋದ್ ನಾಯಕ್ ಒಬ್ಬ ಮೋಸಗಾರ ಎಂದು ವಾಗ್ದಾಳಿ ನಡೆಸಿದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ಗೃಹಸಚಿವರಾಗಿದ್ದ ವೇಳೆ, ಕೆಲ ಸ್ವಾಮೀಜಿಗಳು ಸೇರಿದಂತೆ ವಿರೋಧಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಲು ಹಿಟ್ ಲಿಸ್ಟ್ ಮಾಡಿಕೊಂಡಿದ್ದರು ಎಂದು ದೂರುದಾರ ಆರೋಪಿಸಿದ್ದರು. ಇಲ್ಲಿದೆ ಹೆಚ್ಚಿನ ವಿವರ...