Asianet Suvarna News Asianet Suvarna News

Mareyalagada Matayudda: ವಿದೇಶಿ ಸೊಸೆ Vs ಸ್ವದೇಶಿ ಮಗಳು, ಜಿದ್ದಿನ ರಣರಂಗವಾಯ್ತು ಬಳ್ಳಾರಿ!

ಬಳ್ಳಾರಿಯಲ್ಲಿ ಅಂದು ನಡೆದಿದ್ದು ವಿದೇಶಿ ಬಹು (ಸೊಸೆ) ಹಾಗೂ ಸ್ವದೇಶಿ ಬೇಟಿ (ಮಗಳು) ಕಥೆ. ಇದೇ ಕಾರಣಕ್ಕೆ ಬಳ್ಳಾರಿಯಲ್ಲಿ ಧಗಧಗಿಸಿತ್ತು ಮತಯುದ್ಧ ದಳ್ಳುರಿ. ಸುಷ್ಮಾ ಸ್ವರಾಜ್‌ ಕನ್ನಡದಲ್ಲಿ ಭಾಷಣ ಮಾಡಿ ಬಳ್ಳಾರಿಗರ ಮನ ಗೆದ್ದಿದ್ದರು.

ಬೆಂಗಳೂರು (ಏ.20): 11 ವರ್ಷಗಳ ಅಂತರದಲ್ಲಿ ಮೂರು ಸಾವು. ಮೊದಲು ಮೈದುನ, ನಂತರ ಅತ್ತೆ, ನಂತರ ಕೈಹಿಡಿದ ಗಂಡ. ಮೈದುನ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ, ಅತ್ತೆ ಹಾಗೂ ಗಂಡನನ್ನು ಬಲಿ ಪಡೆದಿದ್ದು ಪ್ರಧಾನಿ ಪಟ್ಟ. ಗಾಂಧಿ ಕುಟುಂಬದಲ್ಲಿ ಒಂದಾದ ಮೇಲೆ ಒಂದರಂತೆ ದುರಂತಗಳನ್ನು ಕಂಡ ಹೆಣ್ಣು ಮಗಳು ಈಕೆ.  ಇಷ್ಟೆಲ್ಲ ಆದ  ಮೇಲೆ ರಾಜಕೀಯಕ್ಕೆ ಬರೋ ಮನಸ್ಸಾಗಲಿ. ಆ ಧೈರ್ಯವಾಗಲಿ ಬರೋದಾದರೂ ಆಕೆಗೆ ಬರೋದಾದರೂ ಎಲ್ಲಿಂದ? ಆದರೂ ಕೊನೆಗೊಂದು ದಿನ ರಾಜಕೀಯಕ್ಕೆ ಕಾಲಿಡಲೇಬೇಕಾಯಿತು. ಮುಂದಿನದ್ದು ಚುನಾವಣೆ. ಇದು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಎದುರಿಸಿದ ಮೊಟ್ಟಮೊದಲ ಚುನಾವಣೆಯ ಮರೆಯಲಾಗದ ಮತಯುದ್ಧದ ಕಥೆ. 
 

Video Top Stories