ನಿನ್ನೆ ಊಟ ಆಯ್ತು, ಇಂದು ಫೋಟೋ, ಆಮೇಲೆ ಓಟ ಆಗುತ್ತೆ: ಚಲವಾದಿ ನಾರಾಯಣಸ್ವಾಮಿ

ಪ್ರಾದೇಶಿಕ ಪಕ್ಷ ತುಳಿದು ಅನ್ಯಾಯ ಮಾಡಿದ್ದು ಕಾಂಗ್ರೆಸ್. ಮೋದಿಯವರನ್ನ ಸೋಲಿಸಬೇಕು ಅನ್ನೋ ವಿಚಾರದಲ್ಲಿ ಕಾಂಗ್ರೆಸ್ ಸದೃಢ ಮಾಡಲು ಹೊರಟಿದ್ದಾರೆ. ನಿನ್ನೆ ಊಟ ಆಯ್ತು, ಇಂದು ಫೋಟೋ, ಆಮೇಲೆ ಓಟ ಆಗುತ್ತೆ.

First Published Jul 18, 2023, 11:30 PM IST | Last Updated Jul 18, 2023, 11:30 PM IST

ಬೆಂಗಳೂರು (ಜು.18): ಬೆಂಗಳೂರಿನಲ್ಲಿ ನಡೆಯುತ್ತಿರೋ ಘಟಬಂಧನ್ ರಾಜಕೀಯ ಸಭೆಯಲ್ಲಿ ತತ್ವ ಸಿದ್ಧಾಂತಗಳು ಬೇರೆ ಬೇರೆಯಾದ್ರೂ, ಕಾಂಗ್ರೆಸ್ ಹೊರತುಪಡಿಸಿ ಯಾವೆಲ್ಲಾ ಪಕ್ಷಗಳು ಸೇರಿದಾವೆ ಅವೆಲ್ಲಾ ಕಾಂಗ್ರೆಸ್ ವಿರೋಧಿ ಪಕ್ಷಗಳಾಗಿವೆ. ಪ್ರಾದೇಶಿಕ ಪಕ್ಷ ತುಳಿದು ಅನ್ಯಾಯ ಮಾಡಿದ್ದು ಕಾಂಗ್ರೆಸ್. ಮೋದಿಯವರನ್ನ ಸೋಲಿಸಬೇಕು ಅನ್ನೋ ವಿಚಾರದಲ್ಲಿ ಕಾಂಗ್ರೆಸ್ ಸದೃಢ ಮಾಡಲು ಹೊರಟಿದ್ದಾರೆ. ಅವರ ಶತ್ರು ಕಾಂಗ್ರೆಸ್ಸನ್ನ ಸದೃಢ ಪಡಿಸಲು ಹೊರಟಿದ್ದಾರೆ. ನಿನ್ನೆ ಊಟ ಆಯ್ತು, ಇಂದು ಫೋಟೋ, ಆಮೇಲೆ ಓಟ ಆಗುತ್ತೆ. ಊಟ, ಫೋಟೋ, ಓಟ ಅಂತ ಛಲವಾದಿ ನಾರಾಯಣಸ್ವಾಮಿ ಪ್ರಾಸವಾಗಿ ಹೇಳಿದರು. 

ಇವರೆಲ್ಲರೂ ಕಾಂಗ್ರೆಸ್ ವಿರೋಧಿಗಳೆ. ಮತ್ತೆ ಮೋದಿ ಪ್ರಧಾನಿ ಆಗ್ತಾರೆ. ಅದನ್ನ ತಡೆಯಲು ಇವರ ಉದ್ದೇಶವಾಗಿದೆ. ಹಿಂದಿಗಿಂತ ಈಗ ದೇಶ ಮುಂದೆ ಬಂದಿದೆ. ಈ ಐದು ವರ್ಷಗಳಲ್ಲಿ 13ಕೋಟಿ ಜನತೆ ಬಡತನದಿಂದ ಹೊರಗೆ ಬಂದಿದೆ ಅಂತ ವರದಿ ಇದೆ. ಭಾರತದ ಜನತೆಗೆ ಶಕ್ತಿ ತುಂಬುವ ಕೆಲಸ ಬಿಜೆಪಿ ಮಾಡಿದೆ. ಹೊರ ದೇಶಗಳಲ್ಲಿ ಮೋದಿ ನಮ್ಮ ಬಾಸ್ ಅಂತ ಹೇಳಿದ್ದಾರೆ. ಇವರ ಕುತಂತ್ರ ನಡೆಯಲ್ಲ. ಇದರ ವೆಚ್ಚ ಯಾರು ಬರಿಸ್ತಾರೆ. ಕುಮಾರಸ್ವಾಮಿ ಅವರು ವಿಚಾರ ಎತ್ತಿದ್ದಾರೆ. ಅವರನ್ನ ಸ್ವಾಗತ ಮಾಡ್ತಾರೆ ಅಂದ್ರೆ ಸರ್ಕಾರದ ಕಾರ್ಯಕ್ರಮ ಆಗುತ್ತೆ. ವೆಚ್ಚವನ್ನ ಸರ್ಕಾರ ಬರಿಸಿದ್ರೆ ನಾವು ವಿರೋಧಿಸ್ತೇವೆ. ಎರಡೂ ಸದನದಲ್ಲಿ ಧ್ವನಿ ಎತ್ತಲಿದ್ದೇವೆ ಎಂದು ಹೇಳಿದರು.