News Hour: ಸಿಎಂ ಕುರ್ಚಿ ಕಿತ್ತಾಟ, ಡಿಕೆಶಿ ಸಂಧಾನ-ಸತೀಶ್ ಜಾರಕಿಹೊಳಿ ಸಮರ!
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್‌ನಿಮದ ದೆಹಲಿಗೆ ಬುಲಾವ್ ಬಂದಿದೆ. ಹೈಕಮಾಂಡ್ ವಾರ್ನಿಂಗ್‌ಗೂ ಕ್ಯಾರೇ ಎನ್ನದೇ ಸಿಎಂ ಕುರ್ಚಿ ಕುಸ್ತಿ ನಡೆಯುತ್ತಿತ್ತು. ಇದು ಡಿಕೆಶಿಯಿಂದ ಶುರುವಾದ ಸಮಸ್ಯೆ ಎಂದು ಹೈಕಮಾಂಡ್ ಅರಿತಿದೆ.
ಬೆಂಗಳೂರು (ನ.7): ಡಿಸಿಎಂ ಡಿಕೆ ಶಿವಕುಮಾರ್‌ಗೆ ಹೈಕಮಾಂಡ್‌ನಿಂದ ಬುಲಾವ್ ಬಂದಿದೆ. ರಾಜ್ಯದಲ್ಲಿ ಸಿಎಂ ಸ್ಥಾನದ ಕುರಿತಾಗಿ ಚರ್ಚೆಯ ಹಿಂದೆ ಡಿಕೆಶಿಯೇ ಇದ್ದಾರೆ ಎನ್ನುವುದನ್ನು ಹೈಕಮಾಂಡ್ ಅರಿತಿದ್ದರಿಂದಲೇ ದೆಹಲಿಗೆ ಬರುವಂತೆ ಡಿಕೆಶಿಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಇದರ ನಡುವೆ ದೆಹಲಿ ಯಾತ್ರೆಗೂ ಮುನ್ನ ಡಿಕೆಶಿ ಹೊಸ ದಾಳ ಉರುಳಿಸಿದ್ದಾರೆ. ಸತೀಶ್ ಜಾರಕಿಹೊಳಿ ಭೇಟಿಯಾಗಿ ಸಂಧಾನ ಸರ್ಕಸ್ ಮಾಡಿದ್ದಾರೆ. ಈ ವೇಳೆ ಮತ್ತೆ ಸಿಎಂ ಕುರ್ಚಿ ಆಸೆಯನ್ನು ಬೆಳಗಾವಿ ಸಾಹುಕಾರ್ ಬಿಚ್ಟಿಟ್ಟಿದ್ದಾರೆ.
ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ: ಸಚಿವ ಸಂತೋಷ್ ಲಾಡ್
ಈ ನಡುವೆ ಬೆಳಗಾವಿ ಸಾಹುಕಾರ್ ದೊಡ್ಡ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರಾ ಎನ್ನುವ ಅನುಮಾನ ಕಾಡಿದೆ. 2028ರ ಚುನಾವಣೆಗೆ ಮುಖ್ಯಮಂತ್ರಿ ಸ್ಥಾನ ಕೇಳುವೆ. ಸಿಎಂ ಸ್ಥಾನಕ್ಕೆ 2028ಕ್ಕೆ ಕ್ಲೈಮ್ ಮಾಡ್ತೀವಿ ಎಂದು ಅವರು ಹೇಳಿದ್ದಾರೆ.