Asianet Suvarna News Asianet Suvarna News

News Hour: ಗ್ಯಾರಂಟಿ ಗಲಾಟೆಗೆ ಬಲಿಯಾದ ಅಧಿವೇಶನದ ಮೊದಲ ದಿನ!

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಜಂಟಿಯಾಗಿ ಮುಗಿಬಿದ್ದಿದೆ. ಇದರಿಂದಾಗಿ ಮಂಗಳವಾರ ಅಧಿವೇಶನದ ಮೊದಲ ದಿನ ಒಂಚೂರು ಚರ್ಚೆ ಸಾಧ್ಯವಾಗಲಿಲ್ಲ.
 

First Published Jul 4, 2023, 11:43 PM IST | Last Updated Jul 4, 2023, 11:43 PM IST


ಬೆಂಗಳೂರು (ಜು.4): ಗ್ಯಾರಂಟಿ ಗಲಾಟೆಗೆ ರಾಜ್ಯ ವಿಧಾನಸಭೆ ಅಧಿವೇಶನ ಬಲಿಯಾಗಿದೆ. ಸರ್ಕಾರದ ವಿರುದ್ಧ ಭಷ್ಟಾಚಾರದ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಇಂದು ಕಾಂಗ್ರೆಸ್‌ ತಿರುಗಿಬಿದ್ದಿದೆ. ತಾಕತ್ತಿದ್ರೆ ದಾಖಲೆ ಕೊಡಿ ಎಂದು ಕಾಂಗ್ರೆಸ್‌, ಎಚ್‌ಡಿಕೆಗೆ ಸವಾಲು ಹಾಕಿದೆ.

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅಧಿವೇಶನದ 2ನೇ ದಿನವೂ ಎಚ್‌ಡಿ ಕುಮಾರಸ್ವಾಮಿ ಸಮರ ಸಾರಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಪಕ್ಷದ ಸಚಿವರುಗಳು ಕೂಡ ತಿರುಗೇಟು ನೀಡಿದ್ದು, ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯೋದಕ್ಕೆ ಫೇಮಸ್‌ ಎಂದು ಎಂಬಿ ಪಾಟೀಲ್‌ ಟೀಕಿಸಿದ್ದಾರೆ.

ದೆಹಲಿಯಲ್ಲಿನ ನಿರ್ಣಯ ಶಾಸಕರ ಸಭೆಯಲ್ಲಿ ಘೋಷಣೆ ಮಾಡ್ತಾರಾ ?: ಯಾರ ಪಾಲಾಗುತ್ತೆ ಕೇಸರಿ ಲೀಡರ್‌ ಕಿರೀಟ..?

ಚುನಾವಣೆ ಸಮಯದಲ್ಲಿ ಘೋಷಣೆ ಮಾಡಿದಂತೆ ಗ್ಯಾರಂಟಿಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಹಾಗಾಗಿ ಎರಡೂ ಸದನಗಳಲ್ಲಿ ಮಂಗಳವಾರ ಯಾವ ಚರ್ಚೆ ಕೂಡ ನಡೆಯಲಿಲ್ಲ.