Asianet Suvarna News Asianet Suvarna News

Karnataka Election:ಬಿಜೆಪಿ ಪಟ್ಟಿಯಲ್ಲಿ ಯಾರಿಗೆ ಶಾಕ್‌..? ಯಾರಿಗೆ ಲಕ್‌..?

ಕಳೆದ ಮೂರ್ನಾಲ್ಕು ದಿನಗಳಿಂದ ಬಿಜೆಪಿ ಸಭೆಗಳನ್ನು ಮಾಡುತ್ತಿದ್ದು 170 ಕ್ಷೇತ್ರಗಳ ಪಟ್ಟಿ ಸಿದ್ಧಗೊಳಿಸಲಾಗಿತ್ತು. ಆದರೆ, 40 ಕ್ಷೇತ್ರಗಳ ಅನುಮಾನ ಇರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸರ್ವೇ ಮಾಡಲು ಮುಂದಾಗಿದೆ. 

First Published Apr 10, 2023, 8:47 PM IST | Last Updated Apr 10, 2023, 8:47 PM IST

ಬೆಂಗಳೂರು (ಏ.10): ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಕೆ ಆರಂಭಕ್ಕೆ ಇನ್ನು ಮೂರೇ ದಿನ ಬಾಕಿಯಿದೆ. ಆದರೂ ಬಿಜೆಪಿಯ ಒಬ್ಬರೇ ಅಭ್ಯರ್ಥಿಯ ಹೆಸರನ್ನೂ ಬಿಡುಗಡೆ ಮಾಡಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಸಭೆಗಳ ಮೇಲೆ ಸಭೆಗಳನ್ನು ಮಾಡಲಾಗುತ್ತಿದ್ದು, 170 ಕ್ಷೇತ್ರಗಳ ಪಟ್ಟಿ ಸಿದ್ಧಗೊಳಿಸಲಾಗಿತ್ತು. ಆದರೆ, ಪಕ್ಷದ ನಾಯಕರಿಗೆ 40 ಕ್ಷೇತ್ರಗಳ ಅಸಮಾಧಾನ ಇರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಆಂತರಿಕ ಸರ್ವೇ ಮಾಡಲು ಮುಂದಾಗಿದೆ. 

ಕರ್ನಾಟಕ ವಿಧಾನಸಭಾ ಚುನಾವನೆಗೆ ಏ.13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಏ.20 ಕೊನೇ ದಿನವಾಗಿದೆ. ಆದರೆ, ನಾಮಪತ್ರ ಸಲ್ಲಿಕೆ ಮಾಡಲು ಇನ್ನು ಕೇವಲ 10 ದಿನಗಳು ಮಾತ್ರ ಬಾಕಿಯಿವೆ. ಆದರೂ, ಬಿಜೆಪಿಯಿಂದ ಒಬ್ಬ ಅಭ್ಯರ್ಥಿಗೂ 'ಬಿ' ಫಾರ್ಮ್‌ ಹಂಚಿಕೆ ಮಾಡಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ವತಿಯಿಂದ ರಾಜ್ಯದ ಕೆಲವು ಮುಖಂಡರೊಂದಿಗೆ ಸಭೆಗಳ ಮೇಲೆ ಸಭೆಗಳನ್ನು ಮಾಡಲಾಗುತ್ತಿದೆ. ಆದರೆ, ರಾಜ್ಯ ನಾಯಕರಲ್ಲಿಯೇ ಅಭ್ಯರ್ಥಿಗಳ ಆಯ್ಕೆಯಲ್ಲಿ ಒಮ್ಮತ ಮೂಡುತ್ತಿಲ್ಲವೇನೋ ಎಂಬ ಅನುಮಾನ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಸಭೆಯಲ್ಲಿ 170 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದರೂ ಅದನ್ನು ಬಿಡುಗಡೆ ಮಾಡದೇ ತಡೆಹಿಡಿಯಲಾಗಿದೆ.

Video Top Stories