ಸಿಎಂ ಸ್ಥಾನಕ್ಕೆ ಡೆಲ್ಲಿಯಲ್ಲಿ ಸರ್ಕಸ್, ಸಿದ್ಧರಾಮಯ್ಯಗೆ ರಾಹುಲ್, ಡಿಕೆಶಿಗೆ ಸೋನಿಯಾ-ಪ್ರಿಯಾಂಕಾ ಬೆಂಬಲ!
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಇಷ್ಟು ದಿನಗಳಾದರೂ ಸಿಎಂ ಯಾರಾಗಬೇಕು ಅನ್ನೋದು ಇನ್ನೂ ಕಾಂಗ್ರೆಸ್‌ನಲ್ಲಿ ನಿರ್ಧಾರವಾಗಿಲ್ಲ. ಡಿಕೆ ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಸಿಎಂ ಸ್ಥಾನಕ್ಕಾಗಿ ಬಿಗಿ ಪಟ್ಟು ಹಿಡಿದು ಕುಳಿತಿದ್ದಾರೆ.
ಬೆಂಗಳೂರು (ಮೇ.17):ಡಿಕೆ ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ನಡುವೆ ಮುಖ್ಯಮಂತ್ರಿ ಖುರ್ಚಿ ಗುದ್ದಾಟ ಬಹಳ ಜೋರಾಗಿಯೇ ನಡೆಯುತ್ತಿದೆ. ಯಾವುದೇ ರಾಜೀ ಸೂತ್ರಕ್ಕೆ ಉಭಯ ನಾಯಕರು ಒಪ್ಪುತ್ತಿಲ್ಲ. ಅದರೊಂದಿಗೆ ನಾಲ್ಕು ದಿನವಾದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಈ ನಡುವೆ ಡಿಕೆ ಶಿವಕುಮಾರ್‌ಗೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಗಾಂಧಿ ಅವರಿಂದ ದೊಡ್ಡ ಬೆಂಬಲ ಸಿಕ್ಕಿದ್ದರೆ, ಸಿದ್ಧರಾಮಯ್ಯಗೆ ರಾಹುಲ್ ಗಾಂಧಿ ಅವರಿಂದ ಬೆಂಬಲ ಸಿಕ್ಕಿದೆ ಎನ್ನಲಾಗಿದೆ. ಡಿಕೆಶಿ ಪಕ್ಷಕ್ಕಾಗಿ ಹಲವು ತ್ಯಾಗಗಳನ್ನು ಮಾಡಿದ್ದಾರೆ. ಅವರಿಗೆ ಈಗ ಅವಕಾಶ ನೀಡಬೇಕು ಎನ್ನುವುದು ಸೋನಿಯಾ, ಪ್ರಿಯಾಂಕಾ ವಾದವಾಗಿದ್ದರೆ, ಲೋಕಸಭಾ ಚುನಾವಣೆ ಹಾಗೂ ಅಹಿಂದ ಮತಗಳ ಕಾರಣದಿಂದಾಗಿ ಸಿದ್ಧರಾಮಯ್ಯ ಅವರನ್ನೇ ಸಿಎಂ ಮಾಡೋದು ಸೂಕ್ತ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಗೆಲುವಿನ ಬಳಿಕ ಕಾಂಗ್ರೆಸ್‌ಗೆ ಅಲರ್ಟ್ ನೀಡಿದ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್!
ಡಿಕೆ ಶಿವಕುಮಾರ್ ಅತಿಯಾಗಿ ನಂಬುವ ನೊಣವಿನಕೆರೆ ಪೀಠದ ಸ್ವಾಮಿಗಳು ಕೂಡ, ಸಿಎಂ ಆಗಲು ಇದೇ ಅತ್ಯುತ್ತಮ ಅವಕಾಶ. ಈ ಸಾರಿ ತಪ್ಪಿದರೆ, ರಾಜಕೀಯ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಬಹುದು ಎಂದು ಹೇಳಿರುವ ಕಾರಣಕ್ಕೆ ಡಿಕೆಶಿ ಪಟ್ಟು ಸಡಿಲಿಸುತ್ತಿಲ್ಲ ಎನ್ನಲಾಗಿದೆ.