Asianet Suvarna News Asianet Suvarna News

News Hour: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಕಮಾಲ್

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕಮಾಲ್‌ ಮಾಡಿದ್ದು, ಪಕ್ಷದ ವತಿಯಿಂದ ಸ್ಪರ್ಧೆ ಮಾಡಿದ್ದ ಮೂವರು ಅಭ್ಯರ್ಥಿಗಳು ಕೂಡ ಗೆಲುವು ಕಂಡಿದ್ದಾರೆ.
 

ಬೆಂಗಳೂರು (ಫೆ.27): ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕಮಾಲ್‌ ಮಾಡಿದೆ. ಕಣದಲ್ಲಿದ್ದ ತನ್ನ ಮೂವರು ಅಭ್ಯರ್ಥಿಗಳನ್ನು ಸಿದ್ಧರಾಮಯ್ಯ, ಡಿಕೆ ಶಿವಕುಮಾರ್‌ ಗೆಲ್ಲಿಸಿಕೊಂಡಿದ್ದಾರೆ. ನಿರೀಕ್ಷೆಯಂತೆಯೇ ನಾಲ್ವರು ಪಕ್ಷೇತರರು ಕಾಂಗ್ರೆಸ್​ಗೆ ಮತ ಹಾಕಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಡಿಕೆಶಿ ಗೇಮ್​ಪ್ಲಾನ್ ದೊಡ್ಡ ಮಟ್ಟದಲ್ಲಿ ಸಕ್ಸಸ್‌ ಕಂಡಿದೆ.  ಬಿಜೆಪಿ ಶಾಸಕ ಸೋಮಶೇಖರ್​ ಕಾಂಗ್ರೆಸ್​ಗೆ ಮತ ಹಾಕಿದ್ದರೆ, ಯಲ್ಲಾಪುರದ ಶಾಸಕ ಶಿವರಾಮ್‌ ಹೆಬ್ಬಾರ್ ಮತದಾನದಿಂದಲೇ ದೂರು ಉಳಿಯುವಂತೆ ಮಾಡಿದ್ದರು.

Watch: ಇದೆಂಥಾ ಸಂಭ್ರಮ... ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ!

ಇನ್ನು ಮೇಲ್ಮನೆ ಮೇಲಾಟದಲ್ಲಿ ಮೈತ್ರಿಕೂಟ ಮುಗ್ಗರಿಸಿದೆ. ಎರಡನೇ ಅಭ್ಯರ್ಥಿ ಕಣಕ್ಕಿಳಿಸಿ ಮುಖಭಂಗಕ್ಕೆ ಒಳಗಾಗಿದದೆ. ಬಿಜೆಪಿಯ ಭಾಂಡಗೆ ಗೆಲುವು ಕಂಡರೆ,  ಜೆಡಿಎಸ್​ನಕುಪೇಂದ್ರ ರೆಡ್ಡಿ ಸೋಲು ಕಂಡಿದ್ದಾರೆ.

Video Top Stories