Asianet Suvarna News Asianet Suvarna News

ಮೂರು ಪಕ್ಷಗಳಿಗೆ ಸವಾಲು : ಸಿಎಂ ಬೊಮ್ಮಾಯಿಗಿದು ಅಗ್ನಿ ಪರೀಕ್ಷೆ

Sep 28, 2021, 12:53 PM IST

ಬೆಂಗಳೂರು (ಸೆ.28):  ಕುರುಕ್ಷೇತ್ರಕ್ಕೂ ಮುನ್ನವೇ ಕ್ವಾರ್ಟರ್ ಫೈನಲ್ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಇದು ಮೊದಲ ಅಗ್ನಿ ಪರೀಕ್ಷೆಯಾಗಿದೆ. ಪ್ರತಿಷ್ಠೆ ಪಣಕ್ಕಿಟ್ಟು ನಾಯಕರು ಹೋರಾಟ ಮಾಡಬೇಕಿದ್ದು, ಮೂರು ಪಕ್ಷಗಳಲ್ಲಿ ಉಪ ಚುನಾವಣೆ (By Election) ಸಂಚಲನ ಮೂಡಿಸಿದೆ. 

2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ: ಸಿದ್ದರಾಮಯ್ಯಗೆ ಎಚ್‌ಡಿಕೆ ಪರೋಕ್ಷ ಚಾಲೆಂಜ್

ಸಿಎಂ ಬೊಮ್ಮಾಯಿಗೆ ಹಾನಗಲ್ ಕ್ಷೇತ್ರ ಸವಾಲಾಗಿದ್ದು ಹಾವೇರಿ ಜಿಲ್ಲೆಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲಬೇಕಾಗಿರುವುದು ಅನಿವಾರ್ಯವಾಗಿದೆ. ಇನ್ನು ಪಾಲಿಕೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಡಿಕೆಶಿಗೂ ಸವಾಲಾಗಿದ್ದು, ಸಿಂದಗಿ ಕ್ಷೇತ್ರ ಮರಳಿ ಪಡೆಯುವುದು ಎಚ್‌ಡಿಕೆಗೆ ಸವಾಲಾಗಿದೆ.