ಬಿಜೆಪಿ, ಕಾಂಗ್ರೆಸ್ ಫೈಟ್ ,ಯಾರಿಗೆ ಎಷ್ಟು ಸ್ಥಾನ ಬರುತ್ತೆ..? ಯಾರು ಸಿಎಂ ಆಗ್ತಾರೆ..?

ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದ್ದು, ಕರ್ನಾಟಕ ಕುರುಕ್ಷೇತ್ರದಲ್ಲಿ ಗೆಲುವು ಸಾಧಿಸಲು ಎಲ್ಲಾ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿವೆ . ಅದರಲ್ಲೂ  ಬಿಜೆಪಿಯಿಂದ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮತಬೇಟೆಗಿಳಿದಿದ್ದಾರೆ. ಇತ್ತ ಕಾಂಗ್ರೆಸ್, ಜೆಡಿಎಸ್ ನಾಯಕರು ಈ ಬಾರಿ ಗೆದ್ದು ಗದ್ದುಗೆ ಏರಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.

First Published May 8, 2023, 3:42 PM IST | Last Updated May 8, 2023, 3:42 PM IST

ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದ್ದು, ಕರ್ನಾಟಕ ಕುರುಕ್ಷೇತ್ರದಲ್ಲಿ ಗೆಲುವು ಸಾಧಿಸಲು ಎಲ್ಲಾ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿವೆ . ಅದರಲ್ಲೂ  ಬಿಜೆಪಿಯಿಂದ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮತಬೇಟೆಗಿಳಿದಿದ್ದಾರೆ. ಇತ್ತ ಕಾಂಗ್ರೆಸ್, ಜೆಡಿಎಸ್ ನಾಯಕರು ಈ ಬಾರಿ ಗೆದ್ದು ಗದ್ದುಗೆ ಏರಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಇನ್ನು ಈ ಬಾರಿ ಎಲ್ಲಾ ಪಕ್ಷದ ಅಜಂಡಾ ಒಂದೇ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎನ್ನುವುದು. ಮತಶಿಕಾರಿಗೆ ಇಳಿದಿರುವ ಘಟಾನುಘಟಿ ನಾಯಕರು ಸ್ಪಷ್ಟ ಬಹುಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದಾರೆ. ಒಂದುವೇಳೆ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸಿದ್ದು ಸೋತು ಡಿಕೆಶಿ ಸಿಎಂ ಆದರು ಸಹಾ ಸರ್ಕಾರ ಸುಭದ್ರವಾಗಿರೋದಿಲ್ಲಾ ಎನ್ನುವ ಸಾಧ್ಯತೆ ಕೂಡ ಇದೆ. ಹಾಗಾದರೆ ಒಟ್ಟಾರೆಯಾಗಿ ಬಿಜೆಪಿ ಅಥವಾ ಕಾಂಗ್ರೆಸ್ ಇವೆರಡರಲ್ಲಿ ಯಾವುದಾದರು ಒಂದು ಪಕ್ಷಕ್ಕೆ ಸ್ಟಷ್ಟ ಬಹುಮತ ಬಂದಿದ್ದೇ ಆದರೆ ಸಿಎಂ ಯಾರಾಗ್ತಾರೆ ಎನ್ನುವ ಮತ್ತಷ್ಟು ಸಾಧ್ಯತೆಗಳಿವೆ.