ದೇವೇಗೌಡರ ಕುಟುಂಬಕ್ಕೆ ಶಕುನಿಯಾಗಿ ಕಾಡ್ತಿರೋದ್ಯಾರು?

ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧಿಸಿದ್ರೆ ಗೆಲ್ಲೋ ಚಾನ್ಸೇ ಇಲ್ವಂತೆ. ಕುಮಾರಸ್ವಾಮಿ ಹೀಗಂದಿದ್ದು ಯಾಕೆ..? ಹಾಸನ ಅಖಾಡದ ಗ್ರೌಂಡ್ ರಿಯಾಲಿಟಿ ಹೇಳೋದೇನು..?  ಇಲ್ಲಿದೆ ಡಿಟೇಲ್ ಸ್ಟೋರಿ

First Published Apr 12, 2023, 4:36 PM IST | Last Updated Apr 12, 2023, 4:36 PM IST

ಹಾಸನ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ದೇವೇಗೌಡರ ಕುಟುಂಬದಲ್ಲೇ ದೊಡ್ಡ ಕಾಳಗವೇರ್ಪಟ್ಟಿತ್ತು.  ಭವಾನಿ ರೇವಣ್ಣ ಟಿಕೆಟ್‌ಗಾಗಿ ಹೋರಾಟ ಮಾಡುತ್ತಿದ್ದರೆ, ಇತ್ತ ಕುಮಾರಸ್ವಾಮಿ ಹಾಗೂ ದೇವೇಗೌಡರು ಅಲ್ಲಿ ಭವಾನಿಗೆ ಟಿಕೆಟ್ ನೀಡಲು ಸಾಧ್ಯವೇ ಇಲ್ಲ ಎಂಬ ಮಾತನ್ನು ಹೇಳಿದರು. ಅಲ್ಲದೇ ಕೆಲವು ಶಕುನಿಗಳು ನಮ್ಮ ಕುಟುಂಬದ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದು  ಕುಮಾರಸ್ವಾಮಿ ದೂರಿದರು ಹಾಗಾದರೆ ದೇವೇಗೌಡರ ಕುಟುಂಬವನ್ನು ಕಾಡುತ್ತಿರುವ ಶಕುನಿಗಳು ಯಾರು ಇದೇ ಇಂದಿನ ಸುವರ್ಣ ಫೋಕಸ್ ಈ ವಿಡಿಯೋ ನೋಡಿ..
 

Video Top Stories