ಗೆಲ್ಲುವ ಅಭ್ಯರ್ಥಿಗಳಿಗೆ ಬಿಜೆಪಿ ಹೈಕಮಾಂಡ್ ಶೋಧ: ಶುರುವಾಯ್ತು ಸೀಕ್ರೆಟ್ ಸರ್ವೆ?
ಕರ್ನಾಟಕ ಚುನಾವಣೆಗೆ ಬಿಜೆಪಿಯಿಂದ ಪೂರ್ವ ಸಿದ್ಧತೆ ನಡೆದಿದ್ದು, ಗೆಲ್ಲುವ ಅಭ್ಯರ್ಥಿಗಳಿಗಾಗಿ ಹೈಕಮಾಂಡ್ ಶೋಧ ನಡೆಸಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಗೆಲ್ಲುವ ಅಭ್ಯರ್ಥಿಗಳಿಗಾಗಿ ಬಿಜೆಪಿ ಹೈಕಮಾಂಡ್ ಶೋಧ ನಡೆಸಿದೆ. ಪ್ರಮುಖ ಬಿಜೆಪಿ ಕಾರ್ಯಕರ್ತರು ಪದಾಧಿಕಾರಿಗಳಿಗೆ ಕರೆ ಮಾಡಲಾಗಿದೆ. ಬೆಳಗಾವಿಯ ಹಲವು ಕಾರ್ಯಕರ್ತರಿಗೆ ರ್ಯಾಂಡಮ್ ಕಾಲ್ ಮಾಡಲಾಗಿದ್ದು, ಹಾಲಿ, ಮಾಜಿ ಶಾಸಕರಿಗೆ ಟೆನ್ಷನ್ ಶುರುವಾಗಿದ್ದು, ಹೊಸ ಆಕಾಂಕ್ಷಿಗಳಿಗೆ ಫೋನ್ ಕಾಲ್ ಹೊಸ ಚೈತನ್ಯ ನೀಡಿದೆ. ಕಾಲ್ ಮಾಡಿ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೂರನೇ ವ್ಯಕ್ತಿಯ ಮೂಲಕ, ಶಾಸಕರ ಕೆಲಸದ ಬಗ್ಗೆಯೂ ಪರಿಶೀಲನೆ. ಪ್ರಮುಖ ಕಾರ್ಯಕರ್ತರು, ಪದಾಧಿಕಾರಿಗಳ ಮನವಲಿಸೋಕೆ ಯತ್ನ ನಡೆದಿದೆ.
Davanagere: ಡಿ.20ರಂದು ಬೆಳಗಾವಿಯ ಸುವರ್ಣಸೌಧದ ಎದುರು ರೈತರಿಂದ ಪ್ರತಿಭಟನೆ