ಹೇಗಿದೆ ಗೊತ್ತಾ.. ದಾಳ.. ಗಾಳ.. ಆಳ.. ಹೊಸ ಹೊಸ ಲೆಕ್ಕಾಚಾರ..?

ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗುತ್ತೆ. ಮಾಧ್ಯಮದ ಗುಪ್ತ ಭವಿಷ್ಯವಾಣಿ ಬಟಾಬಯಲಾಗುತ್ತೆ.

First Published May 13, 2023, 10:51 AM IST | Last Updated May 13, 2023, 10:51 AM IST

ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗುತ್ತೆ. ಮಾಧ್ಯಮದ ಗುಪ್ತ ಭವಿಷ್ಯವಾಣಿ ಬಟಾಬಯಲಾಗುತ್ತೆ.. ಹೊಸ ಸರ್ಕಾರವೊಂದಕ್ಕೆ ಹೊಸ ಜೀವ ಬರುತ್ತೆ. ಆದರೆ ಆ ಸರ್ಕಾರ ರಚಿಸೋದು ಯಾರು..?ರಾಜ್ಯದ ಚುಕ್ಕಾಣಿಗಾಗಿ ಹಿಡಿಯೋಕೆ ಬಿಜೆಪಿ ಕಸರತ್ತು ಮಾಡಿತ್ತು. ಈಗ ಆ ಪ್ರಯತ್ನಗಳ ಫಲ ಕೈಗೂಡುತ್ತೋ ಇಲ್ವೋ ಅನ್ನೋದನ್ನ ನೋಡುವ ಸಮಯ ಬಂದಿದೆ. ಫಲಿತಾಂಶ ಬರುವ ಮೊದಲು, ಕಾಂಗ್ರೆಸ್ ಹಾಗೂ ಈ ಕಡೆ ಬಿಜೆಪಿ, ಈ ಎರಡೂ ಪಕ್ಷಗಳ ನಾಯಕರೂ ಕೂಡ ಸ್ಪಷ್ಟ ಬಹುಮತ ಬಂದೇ ಬರುತ್ತೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಆದರೆ ಅದನ್ನೇ ನೆಚ್ಚಿಕೊಂಡು ಕೂತರೆ, ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾದ್ರೂ, ಸರ್ಕಾರ ರಚಿಸಲು ಸಾಧ್ಯವಾಗೋದಿಲ್ಲ.  ಹಾಗಾಗಿನೇ, ಮೂರೂ ಪಕ್ಷಗಳ ಒಳಮನೆಯಲ್ಲಿ ತಂತ್ರ, ಪ್ರತಿತಂತ್ರ, ವ್ಯೂಹ ಪ್ರತಿವ್ಯೂಹ ಸಿದ್ಧವಾಗ್ತಾ ಇದೆ. 16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು.