Politics: ಮೈಸೂರು-ಕೊಡಗು ಕ್ಷೇತ್ರದಲ್ಲಿ ಸಾಹಸ ಸಿಂಹನಿಗೆ ಇಲ್ವಾ ಟಿಕೆಟ್?
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಯಾರು ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಕುತೂಹಲ ಲೋಕಸಭೆ ಚುನಾವಣೆ ಹೊತ್ತಲ್ಲಿ ಜೋರಾಗಿದೆ. ಮೂಲಗಳ ಪ್ರಕಾರ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ.
ಬೆಂಗಳೂರು (ಮಾ.13): ಕಳೆದ ಹತ್ತು ವರ್ಷಗಳಿಂದ ಮೈಸೂರಿನ ಎಂಪಿ ಆಗಿದ್ದಾರೆ ಪ್ರತಾಪ್ ಸಿಂಹ. ಈ ಹತ್ತು ವರ್ಷಗಳಲ್ಲಿ ಕೊಡಗು-ಮೈಸೂರು ಕ್ಷೇತ್ರಕ್ಕೆ ಅಪಾರ ಕೆಲಸಗಳನ್ನು ಮಾಡಿದ್ದಾರೆ. ಕೆಲಸ ಮಾಡುವುದರಲ್ಲಿ, ರಾಜ್ಯದಲ್ಲಿ ಎಂಪಿಗಳಲ್ಲಿ ಮೊದಲ ಸ್ಥಾನದಲ್ಲಿರೋದು ಪ್ರತಾಪ್ ಸಿಂಹ. ಹಾಗಿದ್ದಲ್ಲಿ ಇಂತ ಒಬ್ಬ ಕೆಲಸಗಾರನಿಗೆ ಬಿಜೆಪಿ ಈ ಬಾರಿ ಟಿಕೆಟ್ ಕೊಡೋದಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿದೆ.
ಪ್ರತಾಪ್ ಸಿಂಹ ಬದಲಿಗೆ ರಾಜಕುಮಾರ ಯದುವೀರ್ ಅವರ ಹೆಸರು ಈ ಕ್ಷೇತ್ರಕ್ಕೆ ಕೇಳಿಬರುತ್ತಿದೆ. ರಾಜವಂಶಸ್ಥ ಯದುವೀರ್ ಅವರಿಗೆ ಬಿಜೆಪಿ ಟಿಕೆಟ್ ಕೊಡುತ್ತಾ ಎನ್ನುವ ಪ್ರಶ್ನೆಗಳೆದ್ದಿವೆ. ಕೆಲಸದಲ್ಲಿ ಕ್ಷೇತ್ರ ಗೆದಿದ್ದ ಸಿಂಹ ಸೋತಿದ್ದೇಲ್ಲಿ? ಕೆಲಸದ ಪಟ್ಟಿ ಮುಂದಿಟ್ಟು ಬಿಜೆಪಿಗೆ ಪ್ರತಾಪ್ ಸಿಂಹ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್, ಯದುವೀರ್ ಸ್ಪರ್ಧೆ?: ಮೈಸೂರಲ್ಲಿ ಅಭ್ಯರ್ಥಿ ಬದಲಾವಣೆ ಸುಳಿವು ಕೊಟ್ಟ ವಿಜಯೇಂದ್ರ!
ಕೊಡಗು-ಮೈಸೂರು ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಅವ್ರಿಗೆ ಟಿಕೆಟ್ ಕೊಟ್ರೆ ನಾವೂ ಒಪ್ಪೋದಿಲ್ಲವೆಂದು ಸ್ಥಳೀಯ ಬಿಜೆಪಿ ನಾಯಕರುಗಳು ಹೇಳುತ್ತಿದ್ದಾರೆ. ಸತತ ಮೂರನೇ ಬಾರಿಗೆ ಇದೇ ಕ್ಷೇತ್ರದಿಂದ ಟಿಕೆಟ್ ಪಡೆಯಲು ಪ್ರತಾಪ್ ಸಿಂಹ ಯಶಸ್ವಿಯಾಗ್ತಾರಾ ಎನ್ನುವುದಕ್ಕೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.