Asianet Suvarna News Asianet Suvarna News

ವೀರಶೈವ ಸಮುದಾಯವನ್ನು 2A ಗಲ್ಲ, OBC ಪಟ್ಟಿಗೆ ಸೇರಿಸಬೇಕು; ಸಿಎಂಗೆ ಒತ್ತಾಯ

ರಾಜ್ಯ ರಾಜಕಾರಣದಲ್ಲಿ ಮೀಸಲಾತಿ ಟೆನ್ಷನ್ ಶುರುವಾಗಿದೆ. ಸಿಎಂಗೆ ಇದು ಸವಾಲಾಗಿದ್ದು, ಯಾರಿಗೆ ಶಿಫಾರಸ್ಸು ಮಾಡ್ತಾರೆ ಎಂಬುದು ಕುತೂಹಲ ಮೂಡಿಸಿದೆ. 

First Published Feb 13, 2021, 1:42 PM IST | Last Updated Feb 13, 2021, 4:11 PM IST

ಬೆಂಗಳೂರು (ಫೆ. 13): ರಾಜ್ಯ ರಾಜಕಾರಣದಲ್ಲಿ ಮೀಸಲಾತಿ ಟೆನ್ಷನ್ ಶುರುವಾಗಿದೆ. ಸಿಎಂಗೆ ಇದು ಸವಾಲಾಗಿದ್ದು, ಯಾರಿಗೆ ಶಿಫಾರಸ್ಸು ಮಾಡ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಇನ್ನು ಪಂಚಮಸಾಲಿ ಸ್ವಾಮೀಜಿಗಳು ಕೂಡಾ ನಮ್ಮ ಜೊತೆ ಬರಲಿ. ಒಬಿಸಿ ಪಟ್ಟಿಗೆ ಸೇರಿಸುವುದು 2A ಗಿಂತ ಜಾಸ್ತಿ ಎಂದು ಬಿಜೆಪಿ ಮುಖಂಡ ಪ್ರಭಾಕರ್ ಕೋರೆ ಹೇಳಿದ್ದಾರೆ. 

ಪಂಚಮಸಾಲಿ ಸಮಾವೇಶದ ಸ್ಥಳ ನಿಗದಿ ಗೊಂದಲಕ್ಕೆ ತೆರ; ಶಕ್ತಿ ಪ್ರದರ್ಶನಕ್ಕೆ ಡೇಟ್, ಪ್ಲೇಸ್ ಫಿಕ್ಸ್!

ಪಂಚಮಸಾಲಿ ಹೋರಾಟ ಮಾಡುತ್ತಿರುವವರಿಗೆ ಮಾಹಿತಿ ಇಲ್ಲ. ಸ್ವಾಮೀಜಿಗಳಿಗೆ ಕಾನೂನಿನ ತಿಳುವಳಿಕೆ ಕೊರತೆ ಇದೆ. ಇಡೀ ವೀರಶೈವ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು. ರಾಜ್ಯದಲ್ಲಿ ಅಷ್ಟೇ ಅಲ್ಲ, ಕೇಂದ್ರದಲ್ಲಿಯೂ ಒಬಿಸಿ ಪಟ್ಟಿಗೆ ಸೇರಿಸಬೇಕು. ಎಷ್ಟೋ ವರ್ಷಗಳಿಂದ ನಮಗೆ ಅನ್ಯಾಯವಾಗಿದೆ. ಅದನ್ನ ಸರಿಪಡಿಸಬೇಕು ಎಂದು ಪ್ರಭಾಕರ್ ಕೋರೆ ಸಿಎಂಗೆ ಒತ್ತಾಯಿಸಿದ್ದಾರೆ. 

Video Top Stories