Asianet Suvarna News Asianet Suvarna News

ರಾಜ್ಯಾಧ್ಯಕ್ಷನಾಗಿ ನಾನು ಸೋಲಿನ ಹೊಣೆ ಹೊತ್ತುಕೊಳ್ಳುತ್ತೇನೆ: ನಳೀನ್ ಕುಮಾರ್ ಕಟೀಲ್

ಗೆದ್ದ ಬಿಜೆಪಿ ಅಭ್ಯರ್ಥಿಗಳಿಗೆ ಹಾಗೂ ಕಾಂಗ್ರೆಸ್‌ಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿದ್ದು, ಬಿಜೆಪಿಯಿಂದ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಹೆಚ್ಚು ಸೀಟ್‌ ಗೆದ್ದಿರುವುದಕ್ಕೆ ಅವರಿಗೂ ಸಹ ಅಭಿನಂದೆಯನ್ನು ಸಲ್ಲಿಸಿದ್ದಾರೆ. ಜನತೆಯ ಆಶೀರ್ವಾದವನ್ನು ನಾವು ಒಪ್ಪಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಸಹಕಾರ ಕೊಡುತ್ತೇವೆ. ವಿರೋಧ ಪಕ್ಷವಾಗಿ ಜವಬ್ದಾರಿಯುತವಾಗಿ ನಾವು ಕೆಲಸವನ್ನು ಮಾಡುತ್ತೇವೆ. ನಮ್ಮ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.  ನಮ್ಮ ಸರ್ಕಾರ ಒಳ್ಳೆಯ ಕೆಲಸವನ್ನು ಮಾಡಿದೆ, ಹಾಗಿದ್ರೂ ಅನಿರೀಕ್ಷಿತವಾದ ಫಲಿತಾಂಶ ಬಂದಿದೆ. ಇದನ್ನು ನಾವು ಒಪ್ಪಿಕೊಳ್ಳುತ್ತೇವೆ. ಇಡೀ ಸೋಲಿನ ಜವಬ್ದಾರಿಯನ್ನು ನಾನು ರಾಜ್ಯಾಧ್ಯಕ್ಷನಾಗಿ ಹೊತ್ತುಕೊಳ್ಳುತ್ತೇನೆ ಎಂದು ನಳೀನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಸೋಲು- ಗೆಲುವು ಬಿಜೆಪಿಗೆ ಹೊಸದಲ್ಲ, ಫಲಿತಾಂಶ ಒಪ್ಪಿಕೊಳ್ಳುತ್ತೇವೆ : ಯಡಿಯೂರಪ್ಪ

Video Top Stories