ನನಗೆ ಹೈಕಮಾಂಡ್‌ ಗಿಫ್ಟ್‌ ಕೊಡುತ್ತೋ ಇಲ್ವೋ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್‌

ನಾನು ದೆಹಲಿಗೆ ಹೋಗಲ್ಲ. ನನ್ನ ಹುಟ್ಟುಹಬ್ಬದ ಹಿನ್ನೆಲೆ ದೇವಸ್ಥಾನಕ್ಕೆ ಹೋಗ್ತಿದ್ದೇನೆ ಎಂದಿದ್ದಾರೆ. ಅಲ್ಲದೆ, ನಿನ್ನೆಯ ಸಭೆಯಲ್ಲಿ ಒನ್ ಲೈನ್ ಅಜೆಂಡಾವನ್ನು ತೆಗೆದುಕೊಂಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

First Published May 15, 2023, 12:01 PM IST | Last Updated May 15, 2023, 12:01 PM IST

ಬೆಂಗಳೂರು (ಮೇ.15): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್‌ಗೆ ಈಗ ಮುಖ್ಯಮಂತ್ರಿ ಆಯ್ಕೆ ವಿಚಾರವೇ ದೊಡ್ಡ ಕಗ್ಗಂಟಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಯಾರು ಸಿಎಂ ಆಗಬೇಕು ಎಂಬ ಪ್ರಶ್ನೆ ಎದ್ದಿದೆ. ರಾಜ್ಯ ರಾಜಧಾನಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರು, ನಾನು ದೆಹಲಿಗೆ ಹೋಗಲ್ಲ. ನನ್ನ ಹುಟ್ಟುಹಬ್ಬದ ಹಿನ್ನೆಲೆ ದೇವಸ್ಥಾನಕ್ಕೆ ಹೋಗ್ತಿದ್ದೇನೆ ಎಂದಿದ್ದಾರೆ. ಅಲ್ಲದೆ, ನಿನ್ನೆಯ ಸಭೆಯಲ್ಲಿ ಒನ್ ಲೈನ್ ಅಜೆಂಡಾವನ್ನು ತೆಗೆದುಕೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ. ಡಬಲ್ ಎಂಜಿನ್ ಸರ್ಕಾರ ನನಗೆ ಸಾಕಷ್ಟು ನೋವುಗಳನ್ನು ನೀಡಿದೆ. ಇದನ್ನು ಹೈಕಮಾಂಡ್‌ ಗಮನಿಸಬೇಕು ಎಂದು ಡಿಕೆ ಶಿವಕುಮಾರ್‌ ಹೇಳಿದ್ದು, ಈ ಮೂಲಕ ಪರೋಕ್ಷವಾಗಿ ನನಗೆ ಸಿಎಂ ಸ್ಥಾನ ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಆದರೂ, ಒನ್ ಲೈನ್ ನಿರ್ಣಯ ಪಾಸ್ ಮಾಡಿದ್ದು, ಮುಖ್ಯಮಂತ್ರಿ ಆಯ್ಕೆಯನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇವೆ.

ನನ್ನ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ. ಇನ್ನು, ನಾನು ದೆಹಲಿಗೆ ಹೋಗುವ ತೀರ್ಮಾನ ಮಾಡಿಲ್ಲ. ನನ್ನ ಬೆಂಬಲಿಗರು ಬೇರೆ ಬೇರೆ ಕಡೆಯಿಂದ ಬಂದಿದ್ದಾರೆ. ಹಾಗೆ, ಇವತ್ತು ನನ್ನ ಹುಟ್ಟು ಹಬ್ಬ ಹಿನ್ನೆಲೆ ಪೂಜೆ ಇದೆ ಎಂದೂ ಹೇಳಿದ್ದಾರೆ. ಕಾಂಗ್ರೆಸ್ ಸಂಪ್ರದಾಯದಂತೆ ಶಾಸಕರು ತಮ್ಮ ಅಭಿಪ್ರಾಯ ನೀಡಿದ್ದಾರೆ, ದೆಹಲಿಗೆ ಹೋಗಬೇಕು ಅಂತ ಇದೆ. ಆದರೆ ಇನ್ನೂ ನಿರ್ಧಾರ ಮಾಡಿಲ್ಲ, ಹೈಕಮಾಂಡ್ ಗಿಫ್ಟ್ ಕೊಡುತ್ತದೋ ಬಿಡುತ್ತದೋ. ರಾಜ್ಯದ ಜನತೆ ನನ್ನ ಮೇಲೆ ವಿಶ್ವಾಸ ಇಟ್ಟು ನನ್ನ ಅಧ್ಯಕ್ಷತೆಯಲ್ಲಿ ಮ್ಯಾಸಿವ್ ಮೆಜಾರಿಟಿ ಬಂದಿದೆ. ಎಲ್ಲ ಕಷ್ಟ, ಕಿರುಕುಳದ ನಡುವೆ ಹಾಗೂ ಡಬಲ್ ಎಂಜಿನ್ ಫೋರ್ಸ್ ನಡುವೆಯೂ ಜನತೆ 135 ಸೀಟುಗಳ ಗಿಫ್ಟ್ ಕೊಟ್ಟಿದ್ದಾರೆ. ಇದಕ್ಕಿಂತ ಹೆಚ್ಚಿಗೆ ಏನು ಬೇಕು?. ಇದೇ ನನಗೆ ನನ್ನ ಬರ್ತ್ ಡೇ ಗಿಫ್ಟ್ ಎಂದೂ ಕೆಪಿಸಿಸಿ ಅಧ್ಯಕ್ಷರು ಹರ್ಷ ವ್ಯಕ್ತಪಡಿಸಿದ್ದಾರೆ.