ನೀರಾವರಿ ಖಾತೆ ಮೇಲೆ ನನಗೆ ಹೆಚ್ಚು ಆಸಕ್ತಿ ಇದೆ: ಟಿ.ಬಿ. ಜಯಚಂದ್ರ

ಮೊದಲು ಸಚಿವ ಸಂಪುಟ ವಿಸ್ತರಣೆಯಾಗ್ತಾಯಿದೆ. ಸ್ಪೀಕರ್‌ ಸ್ಥಾನದ ಬಗ್ಗೆ ಗೊತ್ತಿಲ್ಲ ಅಂತ ಹೇಳಿದ್ದಾರೆ. ನಾನು ಮೂರು ಸಲ ಮಂತ್ರಿಯಾಗಿದ್ದವನು, ಏಳನೇ ಬಾರಿ ವಿಧಾನಸಭೆಗೆ ಪ್ರವೇಶ ಮಾಡಿದ್ದೇನೆ. ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಹೀಗಾಗಿ ಈ ಬಾರಿ ನನಗೆ ಅವಕಾಶ ಮಾಡಿಕೊಡಿ ಅಂತ ಮನವಿ ಮಾಡಿದ್ದೇನೆ: ಟಿ.ಬಿ. ಜಯಚಂದ್ರ 

First Published May 19, 2023, 1:37 PM IST | Last Updated May 19, 2023, 1:37 PM IST

ಬೆಂಗಳೂರು(ಮೇ.19):  ಮಂತ್ರಿ ಸ್ಥಾನವೇ ಇನ್ನೂ ಫೈನಲ್‌ ಆಗಿಲ್ಲ, ಆಗಲೇ ಖಾತೆ ಕ್ಯಾತೆ ಜೋರಾಗಿದೆ. ಹೌದು, ನೀರಾವರಿ ಖಾತೆ ಮೇಲೆ ನನಗೆ ಆಸಕ್ತಿ ಇದೆ ಅಂತ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರ ಅವರು ತಿಳಿಸಿದ್ದಾರೆ. ಸಂಪುಟಕ್ಕೆ ನನ್ನ ಹೆಸರು ಪರಿಗಣಿಸಲು ಮನವಿ ಮಾಡಿದ್ದೇನೆ. ಮೊದಲು ಸಚಿವ ಸಂಪುಟ ವಿಸ್ತರಣೆಯಾಗ್ತಾಯಿದೆ. ಸ್ಪೀಕರ್‌ ಸ್ಥಾನದ ಬಗ್ಗೆ ಗೊತ್ತಿಲ್ಲ ಅಂತ ಹೇಳಿದ್ದಾರೆ. ನಾನು ಮೂರು ಸಲ ಮಂತ್ರಿಯಾಗಿದ್ದವನು, ಏಳನೇ ಬಾರಿ ವಿಧಾನಸಭೆಗೆ ಪ್ರವೇಶ ಮಾಡಿದ್ದೇನೆ. ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಹೀಗಾಗಿ ಈ ಬಾರಿ ನನಗೆ ಅವಕಾಶ ಮಾಡಿಕೊಡಿ ಅಂತ ಮನವಿ ಮಾಡಿದ್ದೇನೆ ಅಂತ ತಿಳಿಸಿದ್ದಾರೆ. 

ನಮ್ಮ ಎಲ್ಲಾ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುತ್ತೇವೆ: ಡಿ.ಕೆ.ಶಿವಕುಮಾರ್‌

Video Top Stories