Asianet Suvarna News Asianet Suvarna News

SSLC ಫೇಲ್, 40 ರೂ. ಸಂಬಳ: ಬೇನಾಮಿ ಆಸ್ತಿಯ ಸೀಕ್ರೆಟ್ ಬಿಚ್ಚಿಟ್ಟ MTB ನಾಗರಾಜ

Nov 20, 2019, 1:20 PM IST

ಹೊಸಕೋಟೆ (ನ.20): ಉಪಚುನಾವಣೆಯ ಕಾವು ಹೆಚ್ಚಾಗುತ್ತಿದ್ದಂತೆ ವಾಕ್ಸಮರ ಜೋರಾಗಿದೆ. ಸಾವಿರಾರು ಕೋಟಿಯ ಒಡೆಯ, ರಾಜ್ಯದ ಅತೀ ಶ್ರೀಮಂತ ಶಾಸಕನೆಂಬ ಖ್ಯಾತಿಯ ಎಂ.ಟಿ.ಬಿ. ನಾಗರಾಜ್, ಈ ಬಾರಿ ಹೊಸಕೋಟೆಯಿಂದ ಬಿಜೆಪಿ ಚಿಹ್ನೆಯಿಂದ ಸ್ಪರ್ಧಿಸುತ್ತಿದ್ದಾರೆ.

ಎಂ.ಟಿ.ಬಿ. ವಿರುದ್ಧ ಬೇನಾಮಿ ಆಸ್ತಿಯ ಆರೋಪ ಕೇಳಿಬಂದಿದೆ. 2018ರ ಮೇ ತಿಂಗಳಲ್ಲಿ 1,015 ಕೋಟಿ ರು. ಆಸ್ತಿ, ಬರೋಬ್ಬರಿ 18 ತಿಂಗಳಿನಲ್ಲಿ 1195.80 ಕೋಟಿ ಆಗಿದೆ.  ಬೇನಾಮಿ ಆಸ್ತಿ ಆರೋಪದ ಬಗ್ಗೆ ಎಂ.ಟಿ.ಬಿ ಪ್ರತಿಕ್ರಿಯೆ ನೀಡಿದರು.

ಚುನಾವಣೆ ನಡೆಯಲಿರುವ 15 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನವಾಗಿತ್ತು. ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.