Asianet Suvarna News Asianet Suvarna News

ದಕ್ಕದ ಮಂತ್ರಿ ಭಾಗ್ಯ: ಪರೋಕ್ಷವಾಗಿ ಕೋಪ ಹೊರಹಾಕಿದ ರೇಣುಕಾಚಾರ್ಯ!

ನನಗೆ ಸಚಿವ ಸ್ಥಾನದ ಆಸೆ ಇರಲಿಲ್ಲ. ನಾನು ಪರವಿ ಕೇಳಿಲ್ಲ| ಮಂತ್ರಿಗಿರಿ ನೀಡುವುದು, ನೀಡದಿರುವುದು ಸಿಎಂ ಪರಮಾಧಿಕಾರ| ಸಿಎಂ ಹಿರಿಯರು, ರಾಜಕೀಯ ಅನುಭವವಿದೆ: ರೇಣುಕಾಚಾರ್ಯ ಪರೋಕ್ಷ ಅಸಮಾಧಾನ

 

ಬೆಂಗಳೂರು[ಫೆ.06]: ಕರ್ನಾಟಕ ಸಂಪುಟ ವಿಸ್ತರಣೆಯಾಗಿದ್ದು, ಹೊಸ 10 ಶಾಸಕರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹೀಗಿರುವಾಗ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಹೊನ್ನಾಳಿ ಬಿಜೆಪಿ ಶಾಸಕ ಎಂ. ಪಿ ರೇಣುಕಾಚಾರ್ಯ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ನನಗೆ ಸಚಿವ ಸ್ಥಾನದ ಆಸೆ ಇರಲಿಲ್ಲ. ನಾನು ಪರವಿ ಕೇಳಿಲ್ಲ. ಮಂತ್ರಿಗಿರಿ ನೀಡುವುದು, ನೀಡದಿರುವುದು ಸಿಎಂ ಪರಮಾಧಿಕಾರ, ಇದನ್ನು ಪ್ರಶ್ನಿಸುವ ಹಕ್ಕು ನನಗಿಲ್ಲ ಎನ್ನುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ ರೇಣುಕಾಚಾರ್ಯ.

ಮುಂದೆ ಈ ಅಸಮಾಧಾನ ತಣ್ಣಗಾಗುತ್ತಾ? ಅಥವಾ ಭುಗಿಲೇಳುತ್ತಾ ಕಾಲವೇ ಉತ್ತರಿಸಲಿದೆ.

Video Top Stories