ಮೈತ್ರಿ ಮೂಲಕವೇ ನಾವು ಅಶಕ್ತರಲ್ಲವೆಂದು ಬಿಜೆಪಿಗೆ ಎಚ್ಚರಿಕೆ ಕೊಟ್ಟ ದೊಡ್ಡಗೌಡ್ರು! ಜೆಡಿಎಸ್‌ಗೆಷ್ಟು ಕ್ಷೇತ್ರ ಹಂಚಿಕೆ?

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಸುವ ಉದ್ದೇಶದಿಂದ ಜೆಡಿಎಸ್‌- ಬಿಜೆಪಿ ಮೈತ್ರಿಗೆ ಮುಂದಾಗಿದ್ದರೂ ಮಾಜಿ ಪ್ರಧಾನಿ ದೇವೇಗೌಡರು ನಾವು ಅಶಕ್ತರಲ್ಲವೆಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

First Published Sep 11, 2023, 6:05 PM IST | Last Updated Sep 11, 2023, 6:05 PM IST

ಬೆಂಗಳೂರು (ಸೆ.11): ಮುಂದಿನ ಲೋಕಸಭಾ ಚುನಾವಣೆಗೆ ದಿನಗಳು ಹತ್ತಿರವಾಗ್ತಾ ಇದೆ. ಕಳೆದ ಬಾರಿ ಭಾರಿ ಗೆಲುವನ್ನ ಕಂಡಿದ್ದ ಭಾರತೀಯ ಜನತಾ ಪಕ್ಷ ಈ ಬಾರಿಯೂ ಕೂಡ ದೊಡ್ಡದೊಂದು ಗುರಿಯನ್ನ ಹಾಕಿಕೊಂಡು ಮೋದಿಯನ್ನ ಗೆಲ್ಲಿಸೋಕೆ ಪಣ ತೊಟ್ಟಿದೆ. ಸ್ಟ್ರಾಟರ್ಜಿಯ ಭಾಗವಾಗಿ ಬಿಜೆಪಿ ಹಾಗೂ ಜೆಡಿಎಸ್ ಮಹಾಮೈತ್ರಿ ಭಾರಿ ಸದ್ದು ಮಾಡ್ತಾ ಇದೆ. ಮೈತ್ರಿಯ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ತುಂಬಾ ಹಿಂದೆಯೇ ಸುದ್ದಿ ಬ್ರೇಕ್ ಮಾಡಿತ್ತು. ಅದಾದ ಬಳಿಕ ಹೈಕಮಾಂಡ್ ಮಾತು ಕಥೆಯ ಬಗ್ಗೆಯೂ ನಿಖರ ವರದಿ ನೀಡಿತ್ತು. ಈಗ ದಳಪತಿಗಳು ಸಮಾವೇಶ ಮಾಡೋ ಮೂಲಕ ಕೊನೆಯ ನಿರ್ಧಾರಕ್ಕೆ ಬಂದಂತಿದೆ. 

ಎರಡು ಪಕ್ಷಗಳ ಮೈತ್ರಿ ಸುಲಭದ ಮಾತೇನಲ್ಲಾ. ಎರಡು ಭಿನ್ನ ಸಿದ್ಧಾಂತಗಳು ಜೊತೆಯಾಗೋದು ಕಷ್ಟ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ರಾಜಕೀಯ ನಾಯಕರು ವಿವಿಧ ಅಭಿಪ್ರಾಯವನ್ನೂ ವ್ಯಕ್ತಪಡಸಿದ್ದಾರೆ. ಮೈತ್ರಿ ಬಗ್ಗೆ ಪಕ್ಷದ ಮುಖಂಡರುಗಳ ಅಭಿಪ್ರಾಯ ಈ ಹಂತದಲ್ಲಿ ಪಕ್ಷಕ್ಕೆ ಮುಖ್ಯವಾಗಿರುತ್ತೆ. ಪಕ್ಷದ ಉಳಿವಿಗೆ ಮೈತ್ರಿ ಯಾಕೆ ಅನಿವಾರ್ಯ ಅನ್ನೋದನ್ನ ಅರ್ಥ ಮಾಡಿಸಬೇಕು. ಹೀಗಾಗಿ ಸಮಾವೇಶ ಹಾಗೂ ಸಭೆಗಳಲ್ಲಿ ದಳಪತಿಗಳು ಬ್ಯುಸಿ ಆಗಿದ್ದಾರೆ. ಅಸಲಿಗೆ ಮೈತ್ರಿ ಹಿಂದೆ ಒಂದಿಷ್ಟು ಜೆಡಿಎಸ್ನ ಒಂದಿಷ್ಟು ಲೆಕ್ಕಗಳಿವೆ. ಅವು ಲಾಭವನ್ನ ತಂದು ಕೊಡುವ ನಿರೀಕ್ಷೆಯಿದೆ. ಮೈತ್ರಿ ಮಾತುಕತೆ ಜೋರಾಗ್ತಾ ಇದ್ದ ಹಾಗೆ ಲಾಭ ನಷ್ಟದ ಲೆಕ್ಕಾಚಾರಗಳೂ ಕೂಡ ಶುರುವಾಗಿದೆ. ಜೆಡಿಎಸ್ ನ ಒಂದಿಷ್ಟು ಡಿಮ್ಯಾಂಡ್ ಜೊತೆಗೆ ಲಾಭವನ್ನ ತಂದು ಕೊಡಬಲ್ಲ ಅಂಶಗಳಿವೆ.