Ground Report: ಕೋಟೆನಾಡಿನಲ್ಲಿ ಚುನಾವಣೆಯ ಕಾವು ಜೋರು

ಮಧ್ಯ ಕರ್ನಾಟಕದ ಚಿತ್ರದುರ್ಗ ಕಾಂಗ್ರೆಸ್‌ನ ಭದ್ರಕೋಟೆಯೆಂದೇ ಹೇಳಲಾಗುತ್ತಿತ್ತು. ಆದರೆ, ಇತ್ತೀಚೆಗೆ ಚಿತ್ರಣ ಬದಲಾಗಿದ್ದು, ಬಿಜೆಪಿ ಹೆಚ್ಚಿನ ಹಿಡಿತ ಸಾಧಿಸಿದೆ.

First Published Dec 1, 2022, 4:54 PM IST | Last Updated Dec 1, 2022, 4:54 PM IST

ಚಿತ್ರದುರ್ಗ (ಡಿ. 1): ಚುನಾವಣಾ ಮಹಾಯುದ್ಧದಲ್ಲಿ ಕೋಟೆ ಗೆಲ್ಲೋರು ಯಾರು? ಮಧ್ಯ ಕರ್ನಾಟಕದ ಚಿತ್ರದುರ್ಗ ಕಾಂಗ್ರೆಸ್‌ನ ಭದ್ರಕೋಟೆಯೆಂದೇ ಹೇಳಲಾಗುತ್ತಿತ್ತು. ಆದರೆ, ಇತ್ತೀಚೆಗೆ ಚಿತ್ರಣ ಬದಲಾಗಿದ್ದು, ಬಿಜೆಪಿ ಹೆಚ್ಚಿನ ಹಿಡಿತ ಸಾಧಿಸಿದೆ. ಈಗ ಬಿಜೆಪಿಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಸವಾಲು ಎದುರಾಗಿದೆ. ಚಿತ್ರದುರ್ಗದಲ್ಲಿ ತಿಪ್ಪಾರೆಡ್ಡಿ ಅವರು ಆರು ಬಾರಿ ಶಾಸಕರಾಗಿದ್ದಾರೆ. ಇನ್ನುಕಾಂಗ್ರೆಸ್‌ ಟಿಕೆಟ್‌ಗೂ ಭಾರಿ ಪೈಪೋಟಿ ನಡೆದಿದೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಹೊಳಲ್ಲೆರೆಯಲ್ಲಿ ಚಂದ್ರಪ್ಪ, ಹೆಚ್. ಆಂಜನೇಯ ಸೇರಿ ವಿವಿಧ ಘಟಾನುಘಟಿಗಳ ಸ್ಪರ್ಧೆ ಏರ್ಪಡಲಿದೆ. ಹಿರಿಯೂರು ಕ್ಷೇತ್ರ ಪುನರ್‍‌ ವಿಂಗಡಣೆ ನಂತರ ಸಾಮಾನ್ಯ ಕ್ಷೇತ್ರವಾಗಿದೆ. ಪ್ರಸ್ತುತ ಹಿರಿಯೂರಿನಲ್ಲಿ ಪೂರ್ಣಿಮಾ ಶಾಸಕಿಯಾಗಿದ್ದಾರೆ. ಆದರೆ, ಈಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪುತ್ರ ಬಾಲಕೃಷ್ಣ ಸ್ಪರ್ಧಿಸುವ ಸಾಧ್ಯತೆ ನಿಚ್ಚಳವಾಗಿ ಕಂಡುಬರುತ್ತಿದೆ. ಇನ್ನು ಚಿತ್ರನಟ ಶಶಿಕುಮಾರ್‍‌ ರಘು ವಿರುದ್ಧ ಸ್ಪರ್ಧೆ ಮಾಡಲು ಚಳ್ಳಕೆರೆಗೆ ಬರುವ ಸಾಧ್ಯತೆ ತೋರುತ್ತಿದೆ. ಹೊಸದುರ್ಗದಲ್ಲಿ ಎಂದಿನಂತೆ ಗೂಳಿ ಕಾಳಗ ಮುಂದುವರೆಯಲಿದೆ.