ಕುಲುಮೆಯಲ್ಲೇ ಬೆಂದ ಬಂಡೆ ಡಿಸಿಎಂ ಆಗಿದ್ದು ಹೇಗೆ ?: ಡಿಕೆ ಸಾಹೇಬನ ಯಶಸ್ಸಿನ ಹಿಂದೆ ಪಂಚಶಕ್ತಿ ರಹಸ್ಯ !
ಕಾಂಗ್ರೆಸ್ ಪಕ್ಷಕ್ಕೆ ಡಿಕೆ ಶಿವಕುಮಾರ್ ಅವರ ಸಾಟಿಯಿಲ್ಲದ ಬದ್ಧತೆ. ಪಕ್ಷಕ್ಕಾಗಿ ಎಂಥಾ ತ್ಯಾಗಕ್ಕೂ ರೆಡಿ ಇರೋ ಡಿಕೆಶಿ, ಅದನ್ನು ಬರೀ ಮಾತಿನಲ್ಲಲ್ಲ, ಕೃತಿಯ ಮೂಲಕ ಸಾಕಷ್ಟು ಬಾರಿ ಮಾಡಿ ತೋರಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವ್ರದ್ದು ಕುತ್ತಿಗೆ ಕುಯ್ದರೂ ಕರಗದ ಕಟ್ಟರ್ ಪಕ್ಷನಿಷ್ಠೆ. ರಾಜ್ಯ ರಾಜಕಾರಣದಲ್ಲಿ ಪಕ್ಷನಿಷ್ಠೆಗೆ ಇನ್ನೊಂದು ಹೆಸರೇ ಕನಕಪುರ ಬಂಡೆ ಡಿ.ಕೆ. ಶಿವಕುಮಾರ್. 61 ವರ್ಷದ ಡಿಕೆ ಪಕ್ಷನಿಷ್ಠೆ ಇವತ್ತು ನಿನ್ನೆಯದ್ದಲ್ಲ. ಇದು 45 ವರ್ಷಗಳ ನಿಷ್ಠೆಯಾಗಿದೆ. ಮಕಾಡೆ ಮಲಗಿದ್ದ ಕಾಂಗ್ರೆಸ್‌ನನ್ನು ಬಡಿದೆಬ್ಬಿಸಿ, ಕರ್ನಾಟಕ ಕುರುಕ್ಷೇತ್ರಕ್ಕೆ ತೂಫಾನ್'ನಂತೆ ನುಗ್ಗಿ, ಸಿದ್ದರಾಮಯ್ಯ ಜೊತೆ ಹೆಗಲಿಗೆ ಹೆಗಲು ಕೊಟ್ಟು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿರೋ ಡಿಕೆ ಶಿವಕುಮಾರ್ ಈಗ ಕೆಪಿಸಿಸಿ ಅಧ್ಯಕ್ಷ ಅಷ್ಟೇ ಅಲ್ಲ, ರಾಜ್ಯದ ಉಪಮುಖ್ಯಮಂತ್ರಿ ಕೂಡ ಆಗಲಿದ್ದಾರೆ. 24ನೇ ವಯಸ್ಸಿನಲ್ಲೇ ದೇವೇಗೌಡರಂಥಾ ದಿಗ್ಗಜನ ವಿರುದ್ಧ ಜಂಗೀಕುಸ್ತಿಗೆ ಇಳಿದಿದ್ದ ಚಿಗುರು ಮೀಸೆ, ಬಿಸಿರಕ್ತದ ಯುವಕ ಇಂದು ರಾಜ್ಯ ರಾಜಕಾರಣದ ಪ್ರಬಲ ಶಕ್ತಿಯಾಗಿ ಬೆಳೆದು ನಿಂತಿರೋ ಕಥೆಯೇ ಅತಿ ರೋಚಕವಾಗಿದೆ.
ಇದನ್ನೂ ವೀಕ್ಷಿಸಿ: ಮೈಸೂರು: ಇಂದಿರಾ ಕ್ಯಾಂಟೀನ್‌ನಲ್ಲಿ ಸಾರ್ವಜನಿಕರಿಗೆ ಹೋಳಿಗೆ ಊಟ !