ಜಮೀರ್‌ಗೆ ನೋಟಿಸ್ ನೀಡಿ ವಾರ್ನಿಂಗ್ ಕೊಟ್ಟ ಕೈ ಹೈಕಮಾಂಡ್, ಸೈಲೆಂಟ್ ಆಗ್ತಾರಾ ಜಮೀರ್‌ ಖಾನ್.?

ಒಕ್ಕಲಿಗ ಸಮಾಜದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಪಕ್ಷದ ಶಾಸಕ ಜಮೀರ್‌ ಅಹಮದ್‌ಖಾನ್‌ ಅವರಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ಎಚ್ಚರಿಕೆ ನೋಟಿಸ್‌ ಜಾರಿಗೊಳಿಸಿದ್ದು, ಪಕ್ಷದ ಶಿಸ್ತು ಹಾಗೂ ಸಿದ್ಧಾಂತಗಳ ‘ಲಕ್ಷ್ಮಣ ರೇಖೆ’ ಮೀರಿ ಹೇಳಿಕೆಗಳನ್ನು ನೀಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. 

First Published Jul 27, 2022, 3:11 PM IST | Last Updated Jul 27, 2022, 3:42 PM IST

ಒಕ್ಕಲಿಗ ಸಮಾಜದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಪಕ್ಷದ ಶಾಸಕ ಜಮೀರ್‌ ಅಹಮದ್‌ಖಾನ್‌ ಅವರಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ಎಚ್ಚರಿಕೆ ನೋಟಿಸ್‌ ಜಾರಿಗೊಳಿಸಿದ್ದು, ಪಕ್ಷದ ಶಿಸ್ತು ಹಾಗೂ ಸಿದ್ಧಾಂತಗಳ ‘ಲಕ್ಷ್ಮಣ ರೇಖೆ’ ಮೀರಿ ಹೇಳಿಕೆಗಳನ್ನು ನೀಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ನಡೆಗೆ ಸ್ವಪಕ್ಷೀಯರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋನಿಯಾ ಗಾಂಧಿ ಸಮನ್ಸ್‌ಗೆ ಕಾಂಗ್ರೆಸ್ ಕೆಂಡ, ಹೈಕಮಾಂಡ್ ನೋಟಿಸ್‌ಗೆ ಜಮೀರ್ ಥಂಡಾ!

‘ಯಾರೋ ಒಬ್ಬ ಮಾತನಾಡಿದ್ದಾನೆ ಎಂದು ಅದರ ಬಗ್ಗೆಯೇ ಚರ್ಚೆ ಮಾಡಬೇಕಾಗಿಲ್ಲ. ಈ ವಿಷಯವನ್ನು ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ಮಾಡಲಾಗುವುದು. ಇಲ್ಲಿ ಅದನ್ನು ಚರ್ಚೆ ಮಾಡುವ ಅಗತ್ಯವಿಲ್ಲ. ಮುಖ್ಯಮಂತ್ರಿ ಆಯ್ಕೆಗೆ ಒಂದು ವ್ಯವಸ್ಥೆ ಇರುತ್ತದೆ. ಅದರಂತೆ ನಡೆದುಕೊಳ್ಳಬೇಕಾಗುತ್ತದೆ’ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಸಿದ್ದು ಅಧಿಕಾರಕ್ಕಾಗಿ ನಮಾಜ್ ಆದ ಬಳಿಕ ಪ್ರಾರ್ಥಿಸಿ: ಜಮೀರ್ ಅಹಮ್ಮದ್

‘ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಆಯ್ಕೆಯಾದ ಶಾಸಕರು, ಹೈಕಮಾಂಡ್‌ ನಿರ್ಧಾರದಂತೆ ಮುಖ್ಯಮಂತ್ರಿ ಆಯ್ಕೆ ಮಾಡಲಾಗುತ್ತದೆ. ಬಿಜೆಪಿ ಸರ್ಕಾರದ ಭ್ರಷ್ಟೋತ್ಸವದ ಬಗ್ಗೆ ಮಾತನಾಡಲು ಪ್ರತಿಕಾಗೋಷ್ಠಿ ಕರೆಯಲಾಗಿದೆ. ಇದರ ಬಗ್ಗೆ ಮಾತನಾಡೋಣ. ಆ ವಿಷಯವನ್ನು ಬಿಟ್ಟುಬಿಡಿ. ನಾನು ಹೇಳುವುದನ್ನು ಕೇಳಿ’ ಎಂದು ಸಿಡಿಮಿಡಿಗೊಂಡರು.