Asianet Suvarna News Asianet Suvarna News

4 ದಿಕ್ಕುಗಳಿಂದ 4 ಅಟ್ಯಾಕ್..ಸಿಎಂ ಸಿದ್ದು.. ಡಿಸಿಎಂ ಡಿಕೆಗೆ ಹೊಸ ಟೆನ್ಷನ್..!

ಕಾಂಗ್ರೆಸ್ ಸರ್ಕಾರಕ್ಕೆ ಎರಡೇ ತಿಂಗಳಲ್ಲಿ 4 ಕಿರಿಕಿರಿ..!
ತೊಂದರೆಗಳ ಸುಳಿಯಲ್ಲಿ ಸಿದ್ದು, ಡಿಕೆಶಿ ಏನವು ..?
ಜೋಡೆತ್ತು ಸರ್ಕಾರದ ಸುತ್ತ 4 ಚಾಲೆಂಜ್..4 ಕಿರಿಕಿರಿ..!
 

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಸರ್ಕಾರಕ್ಕೆ ಎದುರಾಗಿರೋದು ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕು. ನಾಲ್ಕು ಕಿರಿಕಿರಿಗಳು. ಆ ಕಿರಿಕಿರಿಗಳೋ ಒಂದಕ್ಕಿಂತಾ ಒಂದು ಖತರ್ನಾಕ್ ಮತ್ತು ಚಾಲೆಂಜಿಂಗ್. ಆನೆ ನಡೆದದ್ದೇ ದಾರಿ ಅಂತ ಸಾಗ್ತಿದ್ದ ಸರ್ಕಾರದ ವೇಗಕ್ಕೆ ಸ್ಪೀಡ್ ಬ್ರೇಕರ್ ರೀತಿ ಅಪ್ಪಳಿಸಿ ಬಿಟ್ಟಿವೆ ಆ 4 ಕಿರಿಕಿರಿಗಳು. ಅದ್ಧೂರಿ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ(Congress government), ಗ್ಯಾರಂಟಿ ಯೋಜನೆಗಳನ್ನೇ(guarantee) ಮುಂದಿಟ್ಟುಕೊಂಡು ರಾಜಕೀಯ ರಣರಂಗದಲ್ಲಿ ರಣಾರ್ಭಟ ಮಾಡ್ತಾ ಇದೆ. ಕೈ ಸರ್ಕಾರದ ಗ್ಯಾರಂಟಿ ಅಸ್ತ್ರಗಳನ್ನು ಎದುರಿಸಲು ಪ್ರತಿಪಕ್ಷಗಳ ಬಳಿ ಪ್ರತ್ಯಸ್ತ್ರಗಳೇ ಇಲ್ಲ. ಸರ್ಕಾರಕ್ಕೆ ಛಾಟಿ ಬೀಸೋಣ ಅಂದ್ರೆ ವಿರೋಧ ಪಕ್ಷದ ನಾಯಕನೇ ಇಲ್ಲ. ಇನ್ನೇನು ಆನೆ ನಡೆದದ್ದೇ ಹಾದಿ ಅಂತ ಮುನ್ನುಗ್ತಾ ಇದ್ದ ಕೈ ಸರ್ಕಾರಕ್ಕೆ ಬೆನ್ನು ಬೆನ್ನಿಗೆ 4 ಕಿರಿಕಿರಿಗಳು ಶುರುವಾಗಿವೆ. 

ಇದನ್ನೂ ವೀಕ್ಷಿಸಿ:  ಸಿದ್ದು ಸರ್ಕಾರದಲ್ಲಿ ಸಚಿವರು V/S ಶಾಸಕರ ಸಂಘರ್ಷ: ಗೊಂದಲ ಇತ್ಯರ್ಥಕ್ಕೆ ಇಂದು ಎರಡೆರಡು ಮೀಟಿಂಗ್..!

Video Top Stories