ಸಿದ್ದು ಸರ್ಕಾರದಲ್ಲಿ ಸಚಿವರು V/S ಶಾಸಕರ ಸಂಘರ್ಷ: ಗೊಂದಲ ಇತ್ಯರ್ಥಕ್ಕೆ ಇಂದು ಎರಡೆರಡು ಮೀಟಿಂಗ್..!

ರಾಜ್ಯ ಸರ್ಕಾರಕ್ಕೆ ಬಂಡಾಯದ ಟೆನ್ಷನ್
ಸಚಿವರ ವಿರುದ್ಧ ಶಾಸಕರ ಪತ್ರ ಸಮರ
ಶಾಸಕರು, ಸಚಿವರ ಜತೆ ಸಿಎಂ ಮೀಟಿಂಗ್

First Published Jul 27, 2023, 11:39 AM IST | Last Updated Jul 27, 2023, 11:39 AM IST

ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ 30 ಶಾಸಕರು ಬಂಡೆದ್ದಿದ್ದಾರೆ. 20 ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರು(MLAs) ಅಸಮಾಧಾನ ವ್ಯಕ್ತ ಪಡಿಸಿದ್ದು, ಗ್ಯಾರಂಟಿ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಈ ಮುಜುಗರಕ್ಕೆ ತೇಪೆ ಹಚ್ಚು ಸಿಎಂ ಸಿದ್ದರಾಮಯ್ಯ(CM Siddaramaiah) ಸಚಿವರ ಮತ್ತು ಶಾಸಕರ ಜೊತೆ ಮೀಟಿಂಗ್(Meeting) ಮಾಡಲು ಮುಂದಾಗಿದ್ದಾರೆ. ವಿದೇಶದಲ್ಲಿ ಸಿದ್ದು ಸರ್ಕಾರ ಉರುಳಿಸಲು ಸಂಚು ನಡೆಯುತ್ತಿದೆ, ಅನ್ನೋ ಸುದ್ದಿ ಬೆನ್ನಲ್ಲೇ ಸಚಿವರ ವಿರುದ್ಧ ಶಾಸಕರು ಪತ್ರ ಸಮರ ಸಾರಿದ್ದಾರೆ. ಸಿದ್ದರಾಮಯ್ಯಗೆ ಶಾಸಕರು ಪತ್ರ ಬರೆದ ಬೆನ್ನಲ್ಲೇ ಇಂದು ಎರಡೆರಡು ಮೀಟಿಂಗ್ ನಿಗದಿಯಾಗಿದೆ. ಮೊದಲು ಕ್ಯಾಬಿನೆಟ್ ಮೀಟಿಂಗ್ (Cabinet meeting) ಬಳಿಕ ಖಾಸಗಿ ಹೋಟೆಲ್‌ನಲ್ಲಿ ಸಿಎಲ್‌ಪಿ ಸಭೆ  ನಡೆಯಲಿದ್ದು, ಈ ಸಭೆಯಲ್ಲಿ ಸಮಸ್ಯೆ ಇತ್ಯರ್ಥಪಡಿಸಲು ಸಿಎಂ ಮುಂದಾಗಿದ್ದಾರೆ. ಕಲಬುರಗಿಯ ಆಳಂದ ಶಾಸಕ ಬಿ.ಆರ್ ಪಾಟೀಲ್(BR Patil) ಲೆಟರ್ ಹೆಡ್ನಲ್ಲಿ ಯಲಬುರ್ಗಾ ಶಾಸಕ ಬಸವರಾಜ್ ರಾಯರೆಡ್ಡಿ ಸೇರಿದಂತೆ 30 ಶಾಸಕರು ಸಹಿ ಮಾಡಿ ಸಿಎಂಗೆ ದೂರು ಕೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ಉಡುಪಿಯಲ್ಲಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ವಿವಾದ: ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿ