ಕೋಲಾರದಲ್ಲಿ 'ಜಾತಿ ಲೆಕ್ಕಾಚಾರ'ದಿಂದ ಅಖಾಡಕ್ಕೆ ಇಳಿದ ಸಿದ್ದರಾಮಯ್ಯ?
ಸಿದ್ದರಾಮಯ್ಯ ಕೋಲಾರ ಪ್ರವಾಸ ಮಾಡಿದ್ದು, ಮತಗಳ ಲೆಕ್ಕಾಚಾರ ಮಾಡಿ ಅಖಾಡಕ್ಕೆ ಇಳಿದ್ರಾ ಎಂಬ ಪ್ರಶ್ನೆ ಮೂಡಿದೆ.
ಕೋಲಾರದಲ್ಲಿ ಜಾತಿವಾರು ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ರಣತಂತ್ರ ರೂಪಿಸಿದ್ದು, ಅಹಿಂದಾ ಮತ ಸಿದ್ದರಾಮಯ್ಯರ ಕೈ ಹಿಡಿಯುತ್ತಾ ಎಂಬ ಚರ್ಚೆ ನಡೆದಿದೆ. ಅಲ್ಲಿ ಕುರುಬ ಸಮುದಾಯದ 25 ಸಾವಿರ ಮತಗಳಿವೆ, ಎಸ್.ಸಿ 49 ಸಾವಿರ, ಮುಸ್ಲಿಂ 45 ಸಾವಿರ ಮತಗಳು, ಎಸ್.ಟಿ 11 ಸಾವಿರ, ಒಕ್ಕಲಿಗ 28 ಸಾವಿರ ಮತಗಳಿವೆ. ಕೋಲಾರದಲ್ಲಿ ಜಾತಿ ಲೆಕ್ಕಾಚಾರವು ಸಿದ್ದರಾಮಯ್ಯಗೆ ಗೆಲುವು ತಂದು ಕೊಡುತ್ತಾ? ಸಮುದಾಯದ ಸೂತ್ರ ವರ್ಕೌಟ್ ಆದರೆ ಸಿದ್ದರಾಮಯ್ಯ ಜಯ ಸಿಗಲಿದೆ ಎನ್ನಲಾಗುತ್ತಿದೆ.