Asianet Suvarna News Asianet Suvarna News

ನಿಯಮ ಉಲ್ಲಂಘನೆ ವಿಚಾರ: 'ಡಿಸಿ ಏನ್ಮಾಡ್ತಾರೆ ನೋಡ್ತಿನಿ'

Jun 4, 2020, 7:00 PM IST

ಚಿತ್ರದುರ್ಗ: ಸಚಿವ ಶ್ರೀರಾಮುಲು ಲಾಕ್‌ಡೌನ್ ನಿಯಮ ಉಲ್ಲಂಘಿಸಿರುವ ವಿಚಾರಕ್ಕೆ ಕುರಿತಂತೆ, ಚಳ್ಳಕೆರೆ ಶಾಸಕ ರಘುಮೂರ್ತಿ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಮತ್ತು ಸಚಿವ ಶ್ರೀರಾಮುಲು ವಿರುದ್ಧ ಹರಿಹಯ್ದಿದ್ದಾರೆ.

ಬ್ಯಾರೇಜ್ ಗೆ ಬಾಗಿನ ಅರ್ಪಣೆ ವಿಚಾರದಲ್ಲಿ ಶ್ರೀರಾಮುಲು, ರಘುಮೂರ್ತಿ ನಡುವೆ ಜಟಾಪಟಿ ನಡೆದಿತ್ತು. ನನ್ನ ಕ್ಷೇತ್ರದಲ್ಲಿ ಬಾಗಿನ ಅರ್ಪಿಸುವಾಗ ನನ್ನನ್ನೇ ಕಡೆಗಣಿಸಿದ್ದಾರೆ ಎಂದು ರಘುಮೂರ್ತಿ ಆರೋಪಿಸಿದರು.

ಇದನ್ನೂ ನೋಡಿ | ಆರೋಗ್ಯ ಸಚಿವರದ್ದು ಹೇಳೋದು ಆಚಾರ, ತಿನ್ನೋದು ಬದನೆಕಾಯಿ...!...

ಕಾಂಗ್ರೆಸ್ ಶಾಸಕ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ರೆ ಸುಮ್ಮನೆ ಇರ್ತಿದ್ರಾ? 144 ನಿಷೇಧಾಜ್ಞೆ ಉಲ್ಲಂಘನೆಯಾಗಿದೆ ಅವರದ್ದೇ ಸರ್ಕಾರ, ಡಿಸಿ ಏನ್ಮಾಡ್ತಾರೆ ಕಾದು ನೋಡ್ತಿನಿ, ಎಂದು ರಘುಮೂರ್ತಿ ಸವಾಲೆಸೆದಿದ್ದಾರೆ.

ಸಚಿವರಿಂದ ಎಲ್ಲೂ ಶಿಷ್ಟಾಚಾರ ಪಾಲನೆಯಾಗ್ತಿಲ್ಲ, ಜನಸಾಮಾನ್ಯರಿಗೆ ಒಂದು ಕಾನೂನು, ಸಚಿವರಿಗೆ  ಮತ್ತೊಂದು ನಿಯಮನಾ ಎಂದು ಅವರು ಪ್ರಶ್ನಿಸಿದ್ದಾರೆ.