ಜಿಯೋನ್‌ ಹಿಲ್ಸ್‌ ರೆಸಾರ್ಟ್‌ನಲ್ಲಿ ಹಣ ಪತ್ತೆ: ಕಾಂಗ್ರೆಸ್‌ ಅಭ್ಯರ್ಥಿ ವಿರುದ್ದ ಪ್ರಕರಣ ದಾಖಲು

ಕೋಲಾರದ ಜಿಯೋನ್‌ ಹಿಲ್ಸ್‌ ರೆಸಾರ್ಟ್‌ನಲ್ಲಿ 4 ಕೋಟಿಗೂ ಅಧಿಕ ಹಣ ಪತ್ತೆಯಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

First Published May 6, 2023, 10:18 AM IST | Last Updated May 6, 2023, 10:18 AM IST

ಕೋಲಾರ: ಇಲ್ಲಿನ ಜಿಯೋನ್‌ ಹಿಲ್ಸ್‌ ರೆಸಾರ್ಟ್‌ನ ವಿಲ್ಲಾದಲ್ಲಿ ಕೋಟ್ಯಾಂತರ ರೂಪಾಯಿ ಹಣ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎನ್‌. ನಾರಾಯಣ ಸ್ವಾಮಿ ಹಾಗೂ ಅಲ್ಲಿ ವಾಸವಿದ್ದ ರಮೇಶ್‌ ಯಾದವ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಂಗಾರಪೇಟೆ ಕಾಂಗ್ರೆಸ್‌ ಅಭ್ಯರ್ಥಿ ನಾರಾಯಣ ಸ್ವಾಮಿಗೆ ಸೇರಿದ 4 ಕೋಟಿಗೂ ಅಧಿಕ ಹಣವನ್ನು ವಶಕ್ಕೆ ಪಡೆಯಲಾಗಿದೆ. ಈ ಹಣವನ್ನು ಮತದಾರರಿಗೆ ಹಂಚಲು ಇಡಲಾಗಿತ್ತು ಎಂದು ತಿಳಿದುಬಂದಿದೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌.ಎನ್‌. ನಾರಾಯಣ ಸ್ವಾಮಿ ವಿರುದ್ಧ ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ವೀಕ್ಷಿಸಿ: ನೀಟ್ ಪರೀಕ್ಷೆಗೆ ತೊಂದರೆ: ಮೋದಿ ರೋಡ್‌ ಶೋ ಮುಂದೂಡುವಂತೆ ಹೆಚ್‌ಡಿಕೆ ಆಗ್ರಹ

Video Top Stories