ಇದೊಂದು ರಿವರ್ಸ್ ಗೇರ್ ಸರ್ಕಾರ ಎಂಬುದು ಬಜೆಟ್‌ನಿಂದ ಸಾಬೀತಾಗಿದೆ: ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯ ಅವರು ಡಬಲ್ ಸಾಲ ಮಾಡಿದ್ದಾರೆ. ಅಲ್ಲದೇ ಇದೊಂದು ರಿವರ್ಸ್ ಗೇರ್ ಸರ್ಕಾರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಬಜೆಟ್‌ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai ) ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಇದು ರಾಜಕೀಯ ಪ್ರೇರಿತವಾಗಿರುವ ಪೊಲಿಟಿಕಲ್ ಬಜೆಟ್ (budget) ಎಂದರು. ಹಲವಾರು ಅಂಕಿ ಅಂಶಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಸರ್ಕಾರಗಳು ಮಾಡಿರುತ್ತವೆ. ಸಿದ್ದರಾಮಯ್ಯ(Siddaramaiah) ಅವರು ಡಬಲ್ ಸಾಲ ಮಾಡಿದ್ದಾರೆ. ಅಲ್ಲದೇ ಇದೊಂದು ರಿವರ್ಸ್ ಗೇರ್ ಇರುವ ಸರ್ಕಾರ ಎಂಬುದು ಈ ಬಜೆಟ್‌ನಿಂದ ಸಾಭೀತಾಗಿದೆ. ಕೋವಿಡ್ ನಿರ್ವಹಣೆ ಬಗ್ಗೆ ದೇಶವನ್ನು ಜಗತ್ತು ಕೊಂಡಾಡಿದರೆ, ಆರ್ಥಿಕ ನಿರ್ವಹಣೆ ಸರಿಯಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಾಮಾನ್ಯ ಜನರ ಮೇಲೆ ತೆರಿಗೆ ಹೊರೆ ಹೊರಿಸಲಾಗಿದೆ. ಎಂಟು ಸಾವಿರ ಕೋಟಿ ಸಾಲ ಹೆಚ್ಚಳ ಮಾಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಪ್ರೇಯಸಿಯ ಕಥೆ ಮುಗಿಸಿ ದೇಶ ಸುತ್ತಿದ ಕಿಲ್ಲರ್ ಪ್ರೇಮಿ: ಹೈದರಾಬಾದ್ ಟೆಕ್ಕಿಯನ್ನ ಡೆಲ್ಲಿ ಬಾಯ್ ಹೇಗೆಲ್ಲಾ ಕಾಡಿಬಿಟ್ಟ..?