ಕಾಂಗ್ರೆಸ್‌ಗೆ ಶಾಕ್..ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ!? ಬಹಿರಂಗವಾಗಿಯೇ ಹೇಳಿಕೆ ನೀಡಿದ ಬಿಜೆಪಿ ನಾಯಕ !
ಲೋಕಸಭೆಯಲ್ಲಿ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಚರ್ಚೆ
ರಾಜ್ಯಾದ್ಯಂತ ಮೈತ್ರಿ ಬದಲು ಕೆಲವು ಕ್ಷೇತ್ರಗಳಲ್ಲಿ ಒಪ್ಪಂದ
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಹಿರಂಗವಾಗಿಯೇ ಸಿ.ಪಿ.ಯೋಗೇಶ್ವರ್(CP Yogeshwar) ಮಾತನಾಡಿದ್ದಾರೆ. ಕಾಂಗ್ರೆಸ್(Congress) ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದಲ್ಲಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ ಗೆಲ್ಲೋಕೆ ಮೈತ್ರಿ ಮಾಡಿಕೊಳ್ಳೋಕೆ ಪ್ಲ್ಯಾನ್‌ನಲ್ಲಿ ಬಿಜೆಪಿ(BJP) ಇದೆ. ಡಿ.ಕೆ ಸುರೇಶ್ ಸೋಲಿಸಲು JDS ಸಹಾಯ ಕೇಳಿದ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್. ದೇವೇಗೌಡ, ಕುಮಾರಸ್ವಾಮಿ ಸಹಾಯವನ್ನು ಯೋಗೇಶ್ವರ್ ಕೋರಿದ್ದಾರೆ. ಇದು ಪಕ್ಷದ ನಿರ್ಣಯ ಅಲ್ಲ ನನ್ನ ವೈಯಕ್ತಿಕ ವಿಚಾರ ಎಂದು ಸಿಪಿ ಯೋಗೇಶ್ವರ್ ಹೇಳಿದ್ದಾರೆ. ಅಲ್ಲದೇ ಯೋಗೇಶ್ವರ್ ಮಾತು ಕೇಳಿ ಪಕ್ಕದಲ್ಲಿದ್ದ ಅಶ್ವತ್ಥನಾರಾಯಣ್‌ಗೆ ಶಾಕ್ ಆಗಿದೆ.
ಇದನ್ನೂ ವೀಕ್ಷಿಸಿ: ವಿದ್ಯಾರ್ಥಿಗಳಂತೆ ರೈತರಿಗೂ ಸಿದ್ಧವಾಗಿದೆ ಹಾಸ್ಟೆಲ್: ಉಚಿತ ಊಟ, ವಸತಿ ಜೊತೆಗೆ ಕೌಶಲ್ಯ ತರಬೇತಿ