ಇಂದಿನಿಂದ ಸರ್ಕಾರದ ಎರಡು ಗ್ಯಾರಂಟಿಗಳ ಅನುಷ್ಠಾನ: ಸಾಂಕೇತಿಕವಾಗಿ ಕೆಲವು ಕಾರ್ಡ್‌ಗಳಿಗೆ ಹಣ ಸಾಧ್ಯತೆ ?

ಕಾಂಗ್ರೆಸ್‌ನ ಎರಡು ಗ್ಯಾರಂಟಿಗಳು ಇಂದು ಜಾರಿಯಾಗಲಿವೆ. ಅನ್ನಭಾಗ್ಯ ಮತ್ತು ಗೃಹಜ್ಯೋತಿ ಯೋಜನೆಗಳು ಶನಿವಾರದಿಂದ ಆರಂಭವಾಗಲಿವೆ.
 

First Published Jul 1, 2023, 8:41 AM IST | Last Updated Jul 1, 2023, 8:41 AM IST

ಕಾಂಗ್ರೆಸ್‌ ಸರ್ಕಾರದ ಅನ್ನಭಾಗ್ಯ ಮತ್ತು ಗೃಹಜ್ಯೋತಿ ಯೋಜನೆಗಳು ಇಂದಿನಿಂದ ಜಾರಿಯಾಗುತ್ತಿವೆ. ಅನ್ನಭಾಗ್ಯ ಯೋಜನೆಯಡಿ ಕೇಂದ್ರದಿಂದ 5 ಕೆಜಿ ಅಕ್ಕಿ, ರಾಜ್ಯ ಸರ್ಕಾರದಿಂದ 170 ರೂಪಾಯಿ ಹಣ ಕೊಡಲಾಗುವುದು. ಇಂದು ಸಾಂಕೇತಿಕವಾಗಿ ಕೆಲವು ಕಾರ್ಡ್‌ಗಳಿಗೆ ಹಣವನ್ನು ಹಾಕಲಾಗುವುದು. ಈ ಹಣ ಮನೆ ಯಜಮಾನಿಯ ಅಕೌಂಟ್‌ಗೆ ಬರಲಿದೆ. ಇನ್ನೂ ಗೃಹಜ್ಯೋತಿ ಯೋಜನೆಯಡಿ 200 ಯುನಿಟ್‌ ವಿದ್ಯುತ್‌ನನ್ನು ಫ್ರೀಯಾಗಿ ಕೊಡಲಾಗುವುದು. 200 ಯುನಿಟ್‌ಯೊಳಗೆ ವಿದ್ಯುತ್‌ ಉಪಯೋಗಿಸಿದ್ರೆ, ಜುಲೈ ತಿಂಗಳ ಕರೆಂಟ್‌ ಬಿಲ್‌ನನ್ನು ಆಗಸ್ಟ್‌ನಲ್ಲಿ ಕಟ್ಟುವಂತಿಲ್ಲ. ಇನ್ನೂ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 15ರ ತನಕ ಅವಕಾಶವಿದೆ.ಇಂದು ಬಿಪಿಎಲ್‌ ಕಾರ್ಡ್ ಹೊಂದಿರುವವರಿಗೆ 5 ಕೆಜಿ ಅಕ್ಕಿ ಜೊತೆ ಹಣ ಸಿಗಲಿದೆ.

ಇದನ್ನೂ ವೀಕ್ಷಿಸಿ: Lok Sabha election 2024: ಲೋಕಾ ಚುನಾವಣೆಗೆ ಕಾಂಗ್ರೆಸ್‌ನಿಂದ ಭರ್ಜರಿ ತಯಾರಿ!