Panchang: ಇಂದು ಮಿತ್ರ ಸಪ್ತಮಿ, ಸೂರ್ಯೋಪಾಸನೆಯಿಂದ ಫಲ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ರಾಶಿಫಲಗಳೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಬುಧವಾರ, ಸಪ್ತಮಿ ತಿಥಿ, ಧನಿಷ್ಠ ನಕ್ಷತ್ರ.
ಮಾರ್ಗಶಿರ ಮಾಸದ ಈ ಸಪ್ತಮಿ ಮಿತ್ರ ಸಪ್ತಮಿಯಾಗಿದೆ. ಈ ದಿನ ಸೂರ್ಯನ ಆರಾಧನೆ ಮಾಡಬೇಕು. ಸೂರ್ಯ ಮಂತ್ರಗಳ ಪಠಣ ಮಾಡಬೇಕು. ಸವಿತ್ರ ಮಂತ್ರ ಪಠಣ ಉತ್ತಮ. ಸೂರ್ಯನಿಂದ ಏನೆಲ್ಲ ಸಿಗುತ್ತದೆ, ಸೂರ್ಯ ನಮ್ಮ ಜೀವನಕ್ಕೆ ಎಷ್ಟೊಂದು ಅನಿವಾರ್ಯವಾಗಿದ್ದಾನೆ ಎಂಬ ಅರಿವು ಹೊಂದಬೇಕು. ದಿನವಿಶೇಷದ ಜೊತೆಗೆ, ವೀಕ್ಷಕರ ಜೀವನದ ಪ್ರಶ್ನೆಗಳಿಗೆ ಸೂಕ್ತ ಉತ್ತರ, ದ್ವಾದಶ ರಾಶಿಗಳ ಫಲಾಫಲವನ್ನು ಕೂಡಾ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ.
New Year 2023 Astrology: ಹೊಸ ವರ್ಷಕ್ಕೆ ನಿಮ್ಮ ಅದೃಷ್ಟ ಬದಲಿಸಲಿದೆ ಈ ಸಂಖ್ಯೆ