Asianet Suvarna News Asianet Suvarna News

Panchang: ಇಂದು ದತ್ತ ಜಯಂತಿ, ದತ್ತಾತ್ರೇಯರ ಆರಾಧನೆ ಮಾಡಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಬುಧವಾರ, ಚತುರ್ದಶಿ ತಿಥಿ, ಕೃತಿಕಾ ನಕ್ಷತ್ರ.  

ಇಂದು ದತ್ತ ಜಯಂತಿ. ದತ್ತಾತ್ರೇಯರು ವಿಷ್ಣು, ಶಿವ ಹಾಗೂ ಬ್ರಹ್ಮರ ಅಂಶದಿಂದ ಜನಿಸಿದವರು. ಅವರನ್ನು ಪೂಜಿಸಿದರೆ ತ್ರಿಮೂರ್ತಿಗಳ ಆರಾಧನೆ ಮಾಡಿದಂತಾಗುತ್ತದೆ. ಸೃಷ್ಟಿ, ಸ್ಥಿತಿ ಹಾಗೂ ಲಯಗಳ ನಿರ್ವಹಣೆಗೆ ಮೂವರು ದೇವರಿದ್ದಾರೆ. ಆ ಮೂವರೂ ಒಬ್ಬರಾಗಿ ಕಾಣಿಸಿಕೊಂಡರೆ ಅಂಥವರ ತೇಜಸ್ಸೇ ಬೇರೆ ಎನ್ನುತ್ತಾರೆ  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ದತ್ತ ಜಯಂತಿಯ ಮಹತ್ವವೇನು, ಈ ದಿನ ನೀವೇನು ಮಾಡಬೇಕು? ಈ ದಿನ ರಾಶಿಗಳ ಫಲವೇನು, ಜೊತೆಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರವನ್ನೂ ಶಾಸ್ತ್ರಿಗಳು ನೀಡಿದ್ದಾರೆ.  

Datta Jayanti 2022: 24 ಗುರುಗಳನ್ನು ಹೊಂದಿದ್ದ ದತ್ತಾತ್ರೇಯ ಗುರು!