Asianet Suvarna News Asianet Suvarna News

ಕೋರ್ಟ್‌ಗೆ ತೆರಳಲು ಮೆಟ್ರೋ ಹತ್ತಿದ ಸಚಿವ ಡಿಕೆಶಿ!

ರಾಜಕಾರಣಿಗಳು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದು ಅಪರೂಪ. ಉದ್ಘಾಟನೆ ಸಂದರ್ಭದಲ್ಲೋ ಅಥವಾ ಪರಿಶೀಲನೆ ನಡೆಸಲೋ ಅಗ್ಗಾಗೆ ಬಸ್ಸನ್ನೋ ಅಥವಾ ರೈಲನ್ನೋ ಹತ್ತುತ್ತಾರೆ. ಈಗ ರಾಜ್ಯದ ಸಚಿವರೇ ಟ್ರಾಫಿಕ್ ಜಾಮ್‌ನಿಂದ ಬೇಸತ್ತು ನಮ್ಮ ಮೆಟ್ರೋ ಹತ್ತಿದ್ದಾರೆ! 

ಬೆಂಗಳೂರು (ಜೂ.25): ರಾಜಕಾರಣಿಗಳು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದು ಅಪರೂಪ. ಉದ್ಘಾಟನೆ ಸಂದರ್ಭದಲ್ಲೋ ಅಥವಾ ಪರಿಶೀಲನೆ ನಡೆಸಲೋ ಅಗ್ಗಾಗೆ ಬಸ್ಸನ್ನೋ ಅಥವಾ ರೈಲನ್ನೋ ಹತ್ತುತ್ತಾರೆ. ಈಗ ರಾಜ್ಯದ ಸಚಿವರೇ ಟ್ರಾಫಿಕ್ ಜಾಮ್‌ನಿಂದ ಬೇಸತ್ತು ನಮ್ಮ ಮೆಟ್ರೋ ಹತ್ತಿದ್ದಾರೆ! 

ತೆರಿಗೆ ವಂಚನೆ, ಹವಾಲಾ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ.ಶಿವಕಕುಮಾರ್ ಗೆ ಇಂದು ನಿರ್ಣಾಯಕ ದಿನ.  ಡಿಕೆಶಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ವಿಶೇಷ ನ್ಯಾಯಾಲಯ ಇಂದು ತನ್ನ ತೀರ್ಪನ್ನು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ತೆರಳುತ್ತಿದ್ದ ಡಿಕೆಶಿಗೆ ವಾಲ್ಮಿಕಿ ಸಮಾಜದ ಪ್ರತಿಭಟನೆಯ ಬಿಸಿ ತಾಗಿದೆ.

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಿಂದ ವಿಧಾನಸೌಧ ಸುತ್ತಮುತ್ತ  ಫುಲ್ ಟ್ರಾಫಿಕ್ ಜಾಮ್ ಉಂಟಾಗಿದ್ದು, ಡಿಕೆಶಿ ಮೆಟ್ರೋ ಹತ್ತಿಕೊಂಡೇ ಸಿಟಿ ಸಿವಿಲ್ ಕೋರ್ಟ್‌ಗೆ ತೆರಳಿದರು. ಹ್ಞಾಂ, ತಲೆಯೊಳಗಡೆ ಎಷ್ಟೇ ಟೆನ್ಶನ್ ಇದ್ದರೂ, ಸಹ-ಪ್ರಯಾಣಿಕರ ಸೆಲ್ಫೀ ಮನವಿಯನ್ನು ಡಿಕೆಶಿ ತಳ್ಳಿಹಾಕದೇ ಪೋಸ್ ನೀಡಿದ್ದು ವಿಶೇಷವಾಗಿತ್ತು.