ಕ್ಷಮಿಸು ಕಂದಾ!: ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡುತ್ತೆ ಈ ಕೇಸ್!

ಲೈಂಗಿಕ ದೌರ್ಜನ್ಯದ ನೂರು ಪ್ರಕರಣಗಳಾದರೆ, ಕೇವಲ ಮೂರು ಪ್ರಕರಣದ ಆರೋಪಿಗಳಿಗಷ್ಟೇ ಶಿಕ್ಷೆ ಸಿಗುತ್ತದೆ. ಶೇ. 97ರಷ್ಟು ಪ್ರಕರಣದಲ್ಲಿ ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆಗೊಳಿಸುತ್ತಾರೆ. ಪೊಲೀಸ್ ತನಿಖೆಯಲ್ಲಿ ನಡೆಯುತ್ತಿರುವ ಲೋಪ ದೋಷಗಳೇ ಇದಕ್ಕೆ ಪ್ರಮುಖ ಕಾರಣ. ಸದ್ಯ ತಾಯಿಯೊಬ್ಬಳು ತನ್ನ ಮಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ನ್ಯಾಯ ಕೊಡಿಸಿ ಎಂದು ಗೋಗರೆಯುತ್ತಿದ್ದಾಳೆ. ಮಗು ಕೇವಲ 7 ವರ್ಷವಿದ್ದಾಗ ಶಾಲೆಯಲ್ಲೇ ಆಕೆಯ ಮೇಲೆ ದೌರ್ಜನ್ಯ ನಡೆದಿದ್ದು, ಬೆಂಗಳೂರಿನ ಹೊರವಲಯದ ತಿರುಮಲಶೆಟ್ಟಿ ಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು. ಆದರೀಗ ಸಾಕ್ಷ್ಯಾಧಾರ ಇ್ಲಲ ಎಂಬ ಕಾರಣ ನೀಡಿ ಆರೋಪಿಯನ್ನು ನಿರಪರಾಧಿ ಎಂದು ಘೋಷಿಸಲಾಗಿದೆ.

First Published Oct 3, 2019, 12:54 PM IST | Last Updated Oct 3, 2019, 12:54 PM IST

ಬೆಂಗಳೂರು[ಅ.03]: ಲೈಂಗಿಕ ದೌರ್ಜನ್ಯದ ನೂರು ಪ್ರಕರಣಗಳಾದರೆ, ಕೇವಲ ಮೂರು ಪ್ರಕರಣದ ಆರೋಪಿಗಳಿಗಷ್ಟೇ ಶಿಕ್ಷೆ ಸಿಗುತ್ತದೆ. ಶೇ. 97ರಷ್ಟು ಪ್ರಕರಣದಲ್ಲಿ ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆಗೊಳಿಸುತ್ತಾರೆ. ಪೊಲೀಸ್ ತನಿಖೆಯಲ್ಲಿ ನಡೆಯುತ್ತಿರುವ ಲೋಪ ದೋಷಗಳೇ ಇದಕ್ಕೆ ಪ್ರಮುಖ ಕಾರಣ. ಸದ್ಯ ತಾಯಿಯೊಬ್ಬಳು ತನ್ನ ಮಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ನ್ಯಾಯ ಕೊಡಿಸಿ ಎಂದು ಗೋಗರೆಯುತ್ತಿದ್ದಾಳೆ. ಮಗು ಕೇವಲ 7 ವರ್ಷವಿದ್ದಾಗ ಶಾಲೆಯಲ್ಲೇ ಆಕೆಯ ಮೇಲೆ ದೌರ್ಜನ್ಯ ನಡೆದಿದ್ದು, ಬೆಂಗಳೂರಿನ ಹೊರವಲಯದ ತಿರುಮಲಶೆಟ್ಟಿ ಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು. ಆದರೀಗ ಸಾಕ್ಷ್ಯಾಧಾರ ಇ್ಲಲ ಎಂಬ ಕಾರಣ ನೀಡಿ ಆರೋಪಿಯನ್ನು ನಿರಪರಾಧಿ ಎಂದು ಘೋಷಿಸಲಾಗಿದೆ.