Asianet Suvarna News Asianet Suvarna News

ದಳಪತಿ ಸ್ಥಾನಕ್ಕೆ ರೇಸ್‌ನಲ್ಲಿ ತ್ರಿಮೂರ್ತಿಗಳು! ತೆನೆಯ ಹೊರೆ ಯಾರ ತಲೆಗೆ?

Jun 25, 2019, 1:08 PM IST

ಬೆಂಗಳೂರು (ಜೂ.25): ಎಚ್. ವಿಶ್ವನಾಥ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ, ಜೆಡಿಎಸ್ ಕೊನೆಗೂ ಹೊಸ ರಾಜ್ಯಾಧ್ಯಕ್ಷರ ನೇಮಕಕ್ಕೆ ನಿರ್ಧರಿಸಿದೆ. ಈ ವಿಚಾರವನ್ನು ಕಳೆದ ಸೋಮವಾರ ಖುದ್ದು ಪಕ್ಷದ ವರಿಷ್ಠ  ಎಚ್.ಡಿ. ದೇವೇಗೌಡ ಬಹಿರಂಗಪಡಿಸಿದ್ದಾರೆ.

ಜೆಡಿಎಸ್ ಹೊಸ ರಾಜ್ಯಾಧ್ಯಕ್ಷರ ನೇಮಕ ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಹುಟ್ಟುಹಾಕಿದ್ದು, ಹೊಸ ದಳಪತಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಕುತೂಹಲ ಹುಟ್ಟು ಹಾಕಿದೆ. ಮೂವರು ಈ ಹುದ್ದೆಯ ರೇಸ್‌ನಲ್ಲಿದ್ದು, ಜೆಡಿಎಸ್ ವರಿಷ್ಠರು ಯಾರ ಮೇಲೆ ಕೃಪೆ ತೋರಲಿದ್ದಾರೆ ಎಂಬುವುದು ಕಾದು ನೊಡಬೇಕಾಗಿದೆ.

ದೇವೇಗೌಡರು ಈ ಬಾರಿಯೂ ಅಹಿಂದ ನಾಯಕರಿಗೆ ಮಣೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ್ಯಾಧ್ಯಕ್ಷ ಹುದ್ದೆಗೆ ಮೂವರು ಈಗಾಗಲೇ ರೇಸ್‌ನಲ್ಲಿದ್ದಾರೆ. ಹಾಗಾದ್ರೆ ಯಾರಾಗ್ತಾರೆ ರಾಜ್ಯದ ದಳಪತಿ?