Asianet Suvarna News Asianet Suvarna News

‘ಕಾವೇರಿ’ದ ಕರ್ನಾಟಕಕ್ಕೆ ತಂಪೆರೆದ ಪ್ರಾಧಿಕಾರದ ಆದೇಶ!

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಾದ ಸಭೆ ನವದೆಹಲಿಯಲ್ಲಿಂದು ನಡೆದಿದ್ದು,  ಕರ್ನಾಟಕಕ್ಕೆ ಕೊಂಚ ರಿಲೀಫ್ ಸಿಕ್ಕಿದೆ. 

ನವದೆಹಲಿ (ಜೂ. 25): ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಾದ ಸಭೆ ನವದೆಹಲಿಯಲ್ಲಿಂದು ನಡೆದಿದ್ದು, ಕರ್ನಾಟಕಕ್ಕೆ ಕೊಂಚ ರಿಲೀಫ್ ಸಿಕ್ಕಿದೆ. ಆ ಮೂಲಕ ರಾಜ್ಯದ ರೈತರು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.

ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆ ಬಂದರೆ, ಡ್ಯಾಂಗಳಿಗೆ ಒಳಹರಿವು ಪ್ರಮಾಣ ಹೆಚ್ಚಾದರೆ ತಮಿಳುನಾಡಿಗೆ ನೀರು ಬಿಡಿ ಎಂದು ಪ್ರಾಧಿಕಾರ ರಾಜ್ಯಕ್ಕೆ ಸ್ಪಷ್ಟ ಸೂಚನೆ ನೀಡಿದೆ.

ಕರ್ನಾಟಕ ಈವರೆಗೆ 9tmc ನೀರನ್ನು ಬಿಡಬೇಕಿತ್ತು, ಆದರೆ ಮಳೆ ಇಲ್ಲದ ಕಾರಣ ಕೇವಲ 2tmc ನೀರನ್ನು ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ, ಮುಂದಿನ ತಿಂಗಳು ಕರ್ನಾಟಕವು ಸುಮಾರು 39 tmc ನೀರು ಬಿಡಬೇಕಾಗುತ್ತದೆ.

Video Top Stories