Asianet Suvarna News Asianet Suvarna News

ನಮ್ಗೆ ಗೊತ್ತಿಲ್ವಾ ಇವ್ರ ನಾಟಕ: ಸಿಟಿ ರವಿ ಚಾಟಿ!

Jul 21, 2019, 7:02 PM IST

ಬೆಂಗಳೂರು(ಜು.21): ನಾಳೆ(ಜು.22) ಸಿಎಂ ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಬೇಕಿದ್ದು, ಇದರಿಂದ ತಪ್ಪಿಸಿಕೊಳ್ಳಲು ಸಿಎಂ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ನಳಿನ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಸಿಟಿ ರವಿ, ಸದನದಲ್ಲಿ ಕುಮಾರಸ್ವಾಮಿ ಹಾಜರಿರಲಿ ಅಥವಾ ಇಲ್ಲದೆ ಇರಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು. ಯಾರೂ ಏನೇ ನಾಟಕ ಮಾಡಿದರೂ ನಾಳಿನ ಪ್ರಕ್ರಿಯೆ ತಡೆಯಲು ಸಾಧ್ಯವಿಲ್ಲ ಎಂದ ಅವರು, ಸಿಎಂ ಇಲ್ಲದೇ ಇದ್ದರೂ ಮತಕ್ಕೆ ಹಾಕುವ ಅವಕಾಶ ಇದೆ ಎಂದು ಹೇಳಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

Video Top Stories