Asianet Suvarna News Asianet Suvarna News

ಮೆಟ್ರೋ ನಿಲ್ದಾಣದಲ್ಲಿ ರಿವಾಲ್ವರ್? ಶಂಕಿತನಿಗಾಗಿ ಪೊಲೀಸ್ ಬಲೆ

ಬೆಂಗಳೂರಿಗರು ಬೆಚ್ಚಿಬೀಳುವ ಘಟನೆ ಸೋಮವಾರ ರಾತ್ರಿ ನಗರದ ಮೆಜಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ವ್ಯಕ್ತಿಯೊಬ್ಬನು ಬ್ಯಾಗ್‌ನಲ್ಲಿ ರಿವಾಲ್ವರ್ ತಂದಿದ್ದ ಎನ್ನಲಾಗಿದ್ದು, ಮೆಟಲ್ ಡಿಟೆಕ್ಟರ್ ಸದ್ದು ಮಾಡುತ್ತಿದ್ದಂತೆ ಭದ್ರತಾ ಸಿಬ್ಬಂದಿಗಳು ಆತನನ್ನು ತಡೆದು ಹೊರಕಳುಹಿಸಿದ್ದಾರೆ. ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಘಟನೆ ಬಳಿಕ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಶಂಕಿತನಿಗಾಗಿ ಬಲೆ ಬೀಸಿದ್ದಾರೆ.

Video Top Stories