Asianet Suvarna News Asianet Suvarna News

ಅಪಾರ್ಟಮೆಂಟ್ ಪಾರ್ಕಿಂಗ್ ಗೋಡೆ ಕುಸಿತ: 15 ಜನರ ದುರ್ಮರಣ!

ಭಾರೀ ಮಳೆಯ ಪರಿಣಾಮ ಅಪಾರ್ಟಮೆಂಟ್’ವೊಂದರ ಪಾರ್ಕಿಂಗ್ ಗೋಡೆ ಕುಸಿದು ಕನಿಷ್ಠ  15 ಜನ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಪುಣೆ(ಜೂ.29): ಭಾರೀ ಮಳೆಯ ಪರಿಣಾಮ ಅಪಾರ್ಟಮೆಂಟ್’ವೊಂದರ ಪಾರ್ಕಿಂಗ್ ಗೋಡೆ ಕುಸಿದು ಕನಿಷ್ಠ  15 ಜನ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಲ್ಲಿನ ಕೊಂಡ್ವಾ ಪ್ರದೇಶದಲ್ಲಿ ಪಾರ್ಕಿಂಗ್ ಗೋಡೆ ಕುಸಿದಿದ್ದು, ಅಪಾರ್ಟಮೆಂಟ್ ಪಕ್ಕದಲ್ಲೇ ಗುಡಿಸಲಲ್ಲಿ ವಾಸವಿದ್ದ ಸುಮಾರು 15 ಜನ ಕಟ್ಟಡ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ದೌಡಾಯಿಸಿರುವ NDRF ತಂಡ, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..