Asianet Suvarna News Asianet Suvarna News

ಹಾಸನ: ಕಟ್ಟಡದ ಬಾಗಿಲು‌ ಮುರಿದು ಅನ್ನಭಾಗ್ಯದ ಅಕ್ಕಿ ತಿಂದ ಕಾಡಾನೆ...!

ಕಟ್ಟಡದ ಬಾಗಿಲು ಮುರಿದು ಕಳ್ಳರು ಕಳ್ಳತನ ಮಾಡುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಇಲ್ಲೊಂದು ಕಡೆ ಕಾಡಾನೆ (Wild Elephant) ಕಟ್ಟಡದ ಬಾಗಿಲು ಮುರಿದು ಅಕ್ಕಿ ತಿಂದಿದೆ ಎಂದರೆ ಅಚ್ಚರಿ ಅನಿಸುತ್ತೆ ಅಲ್ವಾ..? ಇಂತದ್ದೊಂದು ಘಟನೆ  ಹಾಸನ (Hassan) ಜಿಲ್ಲೆ ಬೇಲೂರು ತಾಲ್ಲೂಕಿನ ಅನುಘಟ್ಟ ಗ್ರಾಮದಲ್ಲಿ ನಡೆದಿದೆ. 
 
ಅನುಘಟ್ಟ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಒಂಟಿ ಸಲಗ ಲಗ್ಗೆ ಇಟ್ಟಿದೆ.  ಕಟ್ಟಡದ ಬಾಗಿಲು ಮುರಿದು ಅಕ್ಕಿಚೀಲ ಹೊರಗೆಳೆದು ತಿಂದಿದೆ. ಕಾಡಾನೆ ದಾಂಧಲೆ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಕಳೆದ ಕೆಲ ದಿನಗಳಿಂದ ಬಯಲುಸೀಮೆ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ.  ಗ್ರಾಮ ಮನೆಗಳ ಸಮೀಪವೇ ಎಂಟ್ರಿಯಾಗಿ ಆತಂಕ ಸೃಷ್ಟಿ ಮಾಡಿದೆ. ಕೂಡಲೇ ಪುಂಡಾನೆಗಳ ಸ್ಥಳಾಂತರಕ್ಕೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.  ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.