Asianet Suvarna News Asianet Suvarna News

'ಹಾವು ಕಡಿದರೆ ಒಬ್ಬರೇ ಸಾಯ್ತಾರೆ, ಆದರೆ ಭೂತಾಯಿ ಕಡಿದರೆ ಇಡೀ ಕುಟುಂಬವೇ ಸಾಯುತ್ತದೆ'

ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಅಬ್ಬರ ಕೊಂಚ ತಗ್ಗಿದ್ದರೂ ಪ್ರವಾಹ ಮಾತ್ರ ತಗ್ಗಿಲ್ಲ. ಭೀಮಾನದಿ ಉಕ್ಕಿ ಹರಿಯುತ್ತಿದೆ. ಅಲ್ಲಿನ ಸ್ಥಿತಿಯಿಂದ ನೊಂದ ಅಜ್ಜಿಯೊಬ್ಬರು ಕಣ್ಣೀರಿಟ್ಟಿದ್ದಾರೆ. 

ಬೆಂಗಳೂರು (ಅ. 17): ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಅಬ್ಬರ ಕೊಂಚ ತಗ್ಗಿದ್ದರೂ ಪ್ರವಾಹ ಮಾತ್ರ ತಗ್ಗಿಲ್ಲ. ಭೀಮಾನದಿ ಉಕ್ಕಿ ಹರಿಯುತ್ತಿದೆ. ಅಲ್ಲಿನ ಸ್ಥಿತಿಯಿಂದ ನೊಂದ ಅಜ್ಜಿಯೊಬ್ಬರು ಕಣ್ಣೀರಿಟ್ಟಿದ್ದಾರೆ. 

ಭೀಮಾ ನದಿ ಪ್ರವಾಹದಲ್ಲಿ ಈಜಿ ಆಂಜನೇಯನಿಗೆ ಪೂಜೆ ಸಲ್ಲಿಸಿದ ಅರ್ಚಕ

'ಹಾವು ಕಡಿದರೆ ಒಬ್ಬರೇ ಸಾಯ್ತಾರೆ. ಆದರೆ ಭೂತಾಯಿ ಕಡಿದರೆ ಇಡೀ ಕುಟುಂಬವೇ ಸಾಯುತ್ತದೆ. ಏನು ಮಾಡೋಣ' ಎಂದು ಭೀಮಾತೀರದ ದೇವಣಗಾಂವ್ ಗ್ರಾಮದ ಅಜ್ಜಿ ಅನ್ನಪೂರ್ಣ ಕಂಬಾರ್ ಕಣ್ಣೀರಿಟ್ಟಿದ್ದಾರೆ. ಇವರು ಎರಡು ಎಕರೆ ಪ್ರದೇಶದಲ್ಲಿ ಹತ್ತಿ, ತೊಗರಿಯನ್ನು ಬೆಳೆದಿದ್ದರು. ಬೆಳೆಯೆಲ್ಲವೂ ನಾಶವಾಗಿದೆ. ಹಾಗಾಗಿ ಅಜ್ಜಿ ಅಳಲು ತೋಡಿಕೊಂಡಿದ್ಧಾರೆ. 

Video Top Stories