Vijayapura: ಈ ಹಾಲೋಕಳಿ ಸಾಹಸೀ ಕ್ರೀಡೆ ನೋಡಿದ್ರೆ ನಿಮ್ಮ ಮೈ ಜುಂ ಎನ್ನೋದು ಗ್ಯಾರಂಟಿ.!
ಹಡಗಲಿಯಲ್ಲಿ ಹಾಲೋಕುಳಿ ಸಂಭ್ರಮ..! ನೋಡುಗರ ಮೈ ಜುಂ ಅನಿಸುವ ಕಂಬ ಏರುವ ಸ್ಪರ್ಧೆ..! ಹೌದು ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರೆಯಲ್ಲಿ ಕಂಡುಬಂದ ದೃಶ್ಯಗಳಿವು. ಗ್ರಾಮದ ದೇವರ ಜಾತ್ರೆಯ ಅಂಗವಾಗಿ ಹಾಲೋಕುಳಿ ಎಂಬ ಕಂಬ ಹತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಹಡಗಲಿಯಲ್ಲಿ ಹಾಲೋಕುಳಿ ಸಂಭ್ರಮ..! ನೋಡುಗರ ಮೈ ಜುಂ ಅನಿಸುವ ಕಂಬ ಏರುವ ಸ್ಪರ್ಧೆ..! ಹೌದು ವಿಜಯಪುರ (Vijayapura) ತಾಲೂಕಿನ ಹಡಗಲಿ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರೆಯಲ್ಲಿ ಕಂಡುಬಂದ ದೃಶ್ಯಗಳಿವು. ಗ್ರಾಮದ ದೇವರ ಜಾತ್ರೆಯ (Temple Fest) ಅಂಗವಾಗಿ ಹಾಲೋಕುಳಿ ಎಂಬ ಕಂಬ ಹತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಗ್ರಾಮದ ದೇವಸ್ಥಾನದ ಆವರಣದಲ್ಲಿ ಸುಮಾರು 40 ಅಡಿ ಎತ್ತರ ಬೃಹತ್ ಕಂಬವನ್ನು ನೆಡುತ್ತಾರೆ. ಆ ಕಂಬಕ್ಕೆ ಮೊದಲೇ ಆಯಿಲ್ ಹಾಗೂ ತುಪ್ಪವನ್ನು ಸುರಿದು ಜಾರುವ ಪದಾರ್ಥಗಳನ್ನು ಹಚ್ಚಲಾಗಿರುತ್ತದೆ. ಗ್ರಾಮದ ಯುವಕರೆಲ್ಲ ಸೇರಿ ಆ ಕಂಬವನ್ನು ಹತ್ತಿ ಅದರ ಮೇಲಿರುವ ಬಾಳೆಹಣ್ಣಿನ ಗೊಂಚಲು ಕೀಳುವ ಸ್ಪರ್ಧೆ ಇದಾಗಿರುತ್ತದೆ. 30ಕ್ಕೂ ಅಧಿಕ ಯುವಕರೆಲ್ಲ ಸೇರಿ ಆ ದೊಡ್ಡದಾದ ಹಾಲುಗಂಬವನ್ನು ಹತ್ತಲು ಶುರುಮಾಡಿದ್ರೆ, ಇತ್ತ ಸುತ್ತಲೂ ಇರುವ ಜನ್ರು ಬ್ಯಾರಲ್ ಗಳಲ್ಲಿ ನೀರು ತುಂಬಿರಿಸಿಕೊಂಡು ಕಂಬ ಹತ್ತುವವರಿಗೆ ನೀರು ಗೊಜ್ಜಲು (ಸಿಡಿಸಲು) ಶುರು ಮಾಡುತ್ತಾರೆ. ಮೇಲಿನಿಂದ ಜಾರುವ ಪದಾರ್ಥಗಳನ್ನು ಕಂಬಕ್ಕೆ ಬಿಡುತ್ತಿದ್ರೆ ಇತ್ತ ಯುವಕರಿಗೆ ನೀರು ಸುರಿದು ಅವರು ಮೇಲೆ ಹತ್ತದಂತೆ ಮಾಡುತ್ತಾರೆ. ಇಂತಹ ಸ್ಪರ್ಧೆಯಲ್ಲಿ ಯುವಕರೆಲ್ಲ ಒಬ್ಬರ ಮೇಲೆ ಒಬ್ಬರು ಹತ್ತಿ ಕೊನೆಗ ಕಂಬದ ತುದಿ ತಲುಪುವುದನ್ನು ನೋಡುತ್ತಿದ್ರೆ ಮೈ ರೋಮಾಂಚನಗೊಳ್ಳುತ್ತದೆ.
ಉಜ್ಜಯಿಸಿ ಪೀಠದಲ್ಲೊಂದು ವಿಶಿಷ್ಟ ಆಚರಣೆ, ದೇವಸ್ಥಾನದ ಗೋಪುರಕ್ಕೆ ಸುರಿಯುತ್ತಾರೆ ಎಣ್ಣೆ!
ಹಾಲುಗಂಬವನ್ನು ಹತ್ತುವ ಸ್ಪರ್ಧೆ ಆರಂಭವಾದರೆ ಹಾಲೋಕುಳಿಯಲ್ಲಿ ಮಿಂದೆದ್ದು ಕೊನೆಗೆ ಗುರಿ ತಲುಪುವ ಈ ಆಟ ಸುಮಾರು ಗಂಟೆಗಳ ವರೆಗೆ ನಡೆಯುತ್ತದೆ. ಯುವಕರೆಲ್ಲ ಮೇಲೆ ಹತ್ತಿ ಜಾರಿ ಜಾರಿ ಬೀಳುತ್ತಿದ್ರೆ ಸುತ್ತಮುತ್ತಲು ಸೇರಿದ ಸಾವಿರಾರು ಪ್ರೇಕ್ಷಕರು ಕೇಕೇ ಸಿಳ್ಳೆಗಳನ್ನು ಹಾಕಿ ಹುರಿದುಂಬಿಸುತ್ತಿರುತ್ತಾರೆ. ಹೀಗೆ ಎರಡ್ಮೂರು ತಾಸುಗಳ ವರೆಗೆ ನಡೆಯುವ ಸ್ಪರ್ಧೆಯಲ್ಲಿ ಯುವಕರು ಹರಸಾಹಸ ಪಟ್ಟು ಶತಾಯಗತಾಯ ಗುರಿ ತಲುಪುತ್ತಾರೆ. ಇನ್ನು ಮತ್ತೊಂದೆಡೆ ಗುಂಡು ಎತ್ತುವುದು, ಕಬ್ಬಿಣದ ವಸ್ತುಗಳು ಎತ್ತುವುದು, ಧಾನ್ಯಗಳ ಚೀಲ ತ್ತುವುದು ಸೇರಿದಂತೆ ಇತರೇ ಭಾರ ಎತ್ತುವ ಸ್ಪರ್ಧೆ ಗಳು ನಡೆಯುತ್ತವೆ. ಇನ್ನೊಂದೆಡೆ ಜಂಗಿ ನಿಕಾಲಿ ಕುಸ್ತಿ ಕೂಡ ನಡೆಯುತ್ತದೆ. ನಶಿಸಿ ಹೋಗುತ್ತಿರುವ ಬಲ ಪ್ರದರ್ಶನ, ವಿವಿಧ ಪ್ರತಿಭೆಗಳನ್ನು ತೋರಿಸುವ ಪ್ರದರ್ಶನಗಳಿಗೆ ಇಲ್ಲಿ ಅವಕಾಶ ನೀಡಲಾಗುತ್ತದೆ.
ಹಾಲೋಕುಳಿ, ಭಾರ ಎತ್ತುವುದು, ಕುಸ್ತಿ, ನಾಟಕ ಪ್ರದರ್ಶನ, ಪುರಾಣ, ಪ್ರವಚನ, ಡೊಳ್ಳಿನ ಪದಗಳು, ಜಾನಪದ ಸೇರಿದಂತೆ ನಿತ್ಯ ಒಂದು ಕಾರ್ಯಕ್ರಮಗಳನ್ನು ಕಮಿಟಿ ಹಾಗೂ ಹಡಗಲಿ ಜನ್ರು ಆಯೋಜಿಸಿದ್ದರು. ಮಾರುತೇಶ್ವರನ 56ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಒಂದು ವಾರಗಳ ವರೆಗೆ ವಿವಿಧ ಕಾರ್ಯಕ್ರಮಗಳು ನಡೆದವು.