Asianet Suvarna News Asianet Suvarna News

ಕಾಪು ಲೈಟ್‌ಹೌಸ್‌ ಮಾರ್ಗ ಸಂಪೂರ್ಣ ಬಂದ್; ಸ್ವರ್ಣ ನದಿ ದಿಕ್ಕೇ ಬದಲು..!

38 ವರ್ಷಗಳಲ್ಲಿ ಕಂಡು ಕೇಳರಿಯದ ಮಹಾಮಳೆಗೆ ಉಡುಪಿ ಸಾಕ್ಷಿಯಾಗಿದೆ. ಕಾಪು ಬೀಚ್‌ನಲ್ಲಿರುವ ಲೈಟ್‌ ಹೌಸ್ ಮಾರ್ಗ ಬಂದ್ ಆಗಿದೆ. ಬ್ರಿಟಿಷರ ಕಾಲದ ಲೈಟ್‌ ಹೌಸ್ ಪ್ರವಾಸಿಗರ ನೆಚ್ಚಿನ ತಾಣ. ಸಾಕಷ್ಟು ಸಿನಿಮಾ ಶೂಟಿಂಗ್‌ಗಳು ಇಲ್ಲಿ ನಡೆದಿವೆ. 
 

ಉಡುಪಿ (ಸೆ. 21): 38 ವರ್ಷಗಳಲ್ಲಿ ಕಂಡು ಕೇಳರಿಯದ ಮಹಾಮಳೆಗೆ ಉಡುಪಿ ಸಾಕ್ಷಿಯಾಗಿದೆ. ಕಾಪು ಬೀಚ್‌ನಲ್ಲಿರುವ ಲೈಟ್‌ ಹೌಸ್ ಮಾರ್ಗ ಬಂದ್ ಆಗಿದೆ. ಬ್ರಿಟಿಷರ ಕಾಲದ ಲೈಟ್‌ ಹೌಸ್ ಪ್ರವಾಸಿಗರ ನೆಚ್ಚಿನ ತಾಣ. ಸಾಕಷ್ಟು ಸಿನಿಮಾ ಶೂಟಿಂಗ್‌ಗಳು ಇಲ್ಲಿ ನಡೆದಿವೆ. 

38 ವರ್ಷಗಳ ಬಳಿಕ ಉಡುಪಿಯಲ್ಲಿ ದಾಖಲೆ ಮಳೆ; ಕೃಷ್ಣ ಮಠಕ್ಕೂ ನುಗ್ಗಿದೆ ನೀರು

ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಕಡಲಿಗೆ ಬೋಟು ಇಳಿಸದಂತೆ ಸೂಚಿಸಲಾಗಿದೆ. ನಿನ್ನೆ ಬೋಟ್‌ನಲ್ಲಿ ಹೋದವರು ವಾಪಸ್ ಬರಲಾಗದೇ ಸೇಂಟ್ ಮೆರೀಸ್‌ ದ್ವೀಪದಲ್ಲಿ ತಂಗಿದ್ದರು. ಇಂದು ಅವರನ್ನು ಕರೆ ತರಲಾಗಿದೆ. ಅಂದರೆ ಕಡಲಿನಲ್ಲಿ ಅಲೆಗಳ ಅಬ್ಬರ ಬಹಳ ಜೋರಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಕೂಡಾ ಸುರಿಯುತ್ತಿದೆ. 

Video Top Stories