Asianet Suvarna News Asianet Suvarna News

ತುಮಕೂರು:  ಮದ್ಯದ ಅಂಗಡಿ ಮುಚ್ಚಿಸಿದ ಮಹಿಳೆಯರಿಗೊಂದು ಸಲಾಂ

ಮದ್ಯದಂಗಡಿ ತೆರೆದಿದ್ದಕ್ಕೆ ಮಹಿಳಾ ಆಕ್ರೋಶ/ ಅಂಗಡಿ ಬಾಗಿಲು ಮುಚ್ಚಲು ಆಗ್ರಹ/ ಎಣ್ಣೆ ಅಂಗಡಿಗೆ ನುಗ್ಗಿದ ಮಹಿಳೆಯರು/ ತುಮಕೂರಲ್ಲಿ ಎಣ್ಣೆ ಅಂಗಡಿ ಬಂದ್ ಮಾಡಿಸಿದ ಮಹಿಳೆಯರು

ತುಮಕೂರು(ಮೇ 05) ಕೊರೋನಾ ಲಾಕ್ ಡೌನ್ ನಡುವೆಯೂ ಮದ್ಯ ಮಾರಾಟ ಆರಂಭವಾಗಿದ್ದು ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಬೆಳಗಾವಿಯಲ್ಲಿ ಮಹಿಳೆಯರು ವೈನ್ ಶಾಪ್ ಗೆ ನುಗ್ಗಿದ್ದರು.

ತುಮಕೂರಿನಲ್ಲಿಯೂ ನಾರಿ ಶಕ್ತಿ ಪ್ರದರ್ಶನನವಾಗಿದೆ.  ಒಂದು ಕಡೆ ಮದ್ಯ ಖರೀದಿಗೆ ಸರತಿ ಸಾಲು ನಿಲ್ಲುವ ಯುವತಿಯರಿದ್ದರೆ ಬಾಗಿಲು ಮುಚ್ಚಿಸಿ ಎನ್ನುವ ಕಷ್ಟ ನುಂಗಿದ ಮಹಿಳೆಯರು ಇದ್ದಾರೆ.