Asianet Suvarna News Asianet Suvarna News

ದೇವಣಗಾಂವ ಕಾಳಜಿ ಕೇಂದ್ರ ಅವ್ಯವಸ್ಥೆ ಸರಿ ಮಾಡಿದ ಅಧಿಕಾರಿಗಳು; ಸುವರ್ಣ ನ್ಯೂಸ್ ಇಂಪ್ಯಾಕ್ಟ್!

ದೇವಣಗಾಂವ ಕಾಳಜಿ ಕೇಂದ್ರದ ಬಗ್ಗೆ ಸುವರ್ಣ ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತು. ಯಾರ್ಯಾರಿಗೆ ಯಾವ ಯಾವ ರೀತಿ ವ್ಯವಸ್ಥೆ ಸಿಕ್ಕಿತು ಎನ್ನುವುದರ ಬಗ್ಗೆಯೂ ಫಾಲೋ ಅಪ್ ಮಾಡಲಾಯ್ತು. ಕಾಳಜಿ ಕೇಂದ್ರದಲ್ಲಿರುವವರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. 

ಬೆಂಗಳೂರು (ಅ. 21): ದೇವಣಗಾಂವ ಕಾಳಜಿ ಕೇಂದ್ರದ ಬಗ್ಗೆ ಸುವರ್ಣ ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತು. ಯಾರ್ಯಾರಿಗೆ ಯಾವ ಯಾವ ರೀತಿ ವ್ಯವಸ್ಥೆ ಸಿಕ್ಕಿತು ಎನ್ನುವುದರ ಬಗ್ಗೆಯೂ ಫಾಲೋ ಅಪ್ ಮಾಡಲಾಯ್ತು. ಕಾಳಜಿ ಕೇಂದ್ರದಲ್ಲಿರುವವರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನೆರವು ಕೂಡಾ ಹರಿದು ಬರುತ್ತಿದೆ. 

ಮಕ್ಕಳು, ವಯೋವೃದ್ಧರು, ಬಾಣಂತಿಯರು ಪರದಾಡುತ್ತಿರುವ ಬಗ್ಗೆ ಸುವರ್ಣ ನ್ಯೂಸ್ ಸವಿಸ್ತಾರವಾಗಿ ವರದಿ ಮಾಡಿತ್ತು. ಒಂದು ಹೊತ್ತು ಮಾತ್ರ ಊಟ ಕೊಡಲಾಗುತ್ತಿದೆ. ನಾವೇನು ಮಾಡೋಣ ಎಂದು ಸಂತ್ರಸ್ತರು ಕಣ್ಣೀರು ಹಾಕಿದ್ದರು. ಇದರ ಬಗ್ಗೆ ಸುವರ್ಣ ನ್ಯೂಸ್ ವರದಿ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. 


 

Video Top Stories