ವಿಜಯಪುರ : ತ್ರಿವರ್ಣ ಬಣ್ಣದಲ್ಲಿ ಸಿಂಗಾರಗೊಂಡ ಐತಿಹಾಸಿಕ ಶಿವಲಿಂಗ!
- ತ್ರಿವರ್ಣ ಬಣ್ಣದಲ್ಲಿ ಸಿಂಗಾರಗೊಂಡ ಐತಿಹಾಸಿಕ ಶಿವಲಿಂಗ!
- ಐತಿಹಾಸಿಕ ಮಲ್ಲಿಕಾರ್ಜುನ ದೇಗುಲದಲ್ಲಿ ಶಿವಲಿಂಗಕ್ಕೆ ರಾಷ್ಟ್ರ ಧ್ವಜದ ಸಿಂಗಾರ
- 2ವರೆ ಕೆ.ಜಿ ಅನ್ನದಲ್ಲಿ ಶಿವಲಿಂಗವನ್ನ ತ್ರಿವರ್ಣದಲ್ಲಿ ಶೃಂಗರಿಸಿದ್ದಾರೆ ಅರ್ಚಕ ಈರಯ್ಯ ಪೂಜಾರಿ
ವಿಜಯಪುರ (ಆ. 15): ಇಲ್ಲಿನ ಐತಿಹಾಸಿಕ ಮಲ್ಲಿಕಾರ್ಜುನ ದೇಗುಲದಲ್ಲಿ ಶಿವಲಿಂಗಕ್ಕೆ ರಾಷ್ಟ್ರ ಧ್ವಜದ ಸಿಂಗಾರ ಮಾಡಲಾಗಿದೆ. ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಕಂಗೊಳಿಸುತ್ತಿದ್ದಾನೆ ಶಿವಪ್ಪ!
ದೇಶದ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೂ ಪ್ರವೇಶ, ಮಿಜೋರಾಂನಲ್ಲಿ ಪ್ರಾಯೋಜಿಕ ಆರಂಭ
ಎರಡೂವರೆ ಕೆ.ಜಿ ಅನ್ನದಲ್ಲಿ ಶಿವಲಿಂಗವನ್ನ ತ್ರಿವರ್ಣದಲ್ಲಿ ಶೃಂಗರಿಸಿದ್ದಾರೆ ಅರ್ಚಕ ಈರಯ್ಯ ಪೂಜಾರಿ. ಶಿವಲಿಂಗದ ಮೇಲೆ ಅಶೋಕ ಚಕ್ರ ರಾರಾಜಿಸುತ್ತಿದೆ. ಭಕ್ತರು ಬೆಳಿಗ್ಗಿನಿಂದಲೇ ವಿಶೇಷ ಅಲಂಕೃತ ಶಿವಲಿಂಗದ ದರ್ಶನ ಪಡೆದಿದ್ಧಾರೆ. 12 ಶತಮಾನದಲ್ಲಿ ಸ್ಥಾಪನೆಗೊಂಡಿರುವ ಐತಿಹಾಸಿಕ ಶಿವಲಿಂಗ ಇದು.