ಕೊರೋನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಜಾಗ

ಕೋವಿಡ್‌ ವೈರಸ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಜಾಗ ಮೀಸಲು| ಜಿಲ್ಲಾಧಿಕಾರಿ ಸೂಚನೆಯಂತೆ ಆನೇಕಲ್‌ ತಾಲೂಕಿನಲ್ಲಿ ಮೂರು ಎಕರೆ ಜಮೀನು ಮೀಸಲು ಇಟ್ಟ ರಾಜ್ಯ ಸರ್ಕಾರ|

First Published Jul 2, 2020, 2:56 PM IST | Last Updated Jul 2, 2020, 2:56 PM IST

ಬೆಂಗಳೂರು(ಜು.02): ಡೆಡ್ಲಿ ಕೊರೋನಾ ವೈರಸ್‌ನಿಂದ ಮೃತಪಟ್ಟವರನ್ನ ಅಂತ್ಯಕ್ರಿಯೆ ಮಾಡಲು ರಾಜ್ಯ ಸರ್ಕಾರ ಮೂರು ಎಕರೆ ಜಮೀನನ್ನು ಮೀಸರಿಸಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಆನೇಕಲ್‌ ತಾಲೂಕಿನಲ್ಲಿ ಮೂರು ಎಕರೆ ಜಮೀನನ್ನು ಕೋವಿಡ್‌ನಿಂದ ಮೃತರಾದವರ ಅಂತ್ಯಸಂಸ್ಕಾರ ಮಾಡಲು ಜಾಗವನ್ನ ಮೀಸಲಿಡಲಾಗಿದೆ. 

ಕೊಪ್ಪಳದಲ್ಲಿ ರಸ್ತೆ ಪಕ್ಕದಲ್ಲೇ ಸೋಂಕಿತೆಯ ಶವ ಸಂಸ್ಕಾರ..!

ಜೆಸಿ ನಗರದಲ್ಲಿ ನಿನ್ನೆ(ಬುಧವಾರ) ಸೋಂಕಿತರ ಅಂತ್ಯಸಂಸ್ಕಾರ ನಡೆದಿತ್ತು.ಈ ಘಟನೆ ಬಳಿಕ ಸಾರ್ವಜನಿಕರಿಂದ ವ್ಯಾಪರ ಟೀಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಸುವರ್ಣ ನ್ಯೂಸ್‌ ವರದಿ ಪ್ರಸಾರ ಮಾಡಿತ್ತು. ಹೀಗಾಗಿ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.