Hijab Row: ವಿಜಯಪುರದ ಶಾಲಾ, ಕಾಲೇಜುಗಳ ಸುತ್ತ ನಿಷೇದಾಜ್ಞೆ

*  ಎರಡು ದಿನ ನಿಷೇದಾಜ್ಞೆ ಜಾರಿ
*  ವಿದ್ಯಾರ್ಥಿಗಳನ್ನ ಹೊರತುಪಡಿಸಿ ಇತರರಿಗೆ ಪ್ರವೇಶ ನಿಷೇಧ
*  ವಿಜಯಪುರ ಜಿಲ್ಲೆಯ ಇತರೆ ಕಾಲೇಜುಗಳಲ್ಲೂ ಬಿಗಿ ಪೊಲೀಸ್‌ ಭದ್ರತೆ

First Published Feb 17, 2022, 11:39 AM IST | Last Updated Feb 17, 2022, 11:39 AM IST

ವಿಜಯಪುರ(ಫೆ.17): ನಗರದಲ್ಲಿ ಹಿಜಾಬ್‌ ಸಂಘರ್ಷದ ಕಿಚ್ಚು ಜೋರಾಗಿದೆ. ಹೌದು,  ಶಾಲಾ, ಕಾಲೇಜುಗಳ ಸುತ್ತ 200 ಮೀಟರ್‌ ನಿಷೇದಾಜ್ಞೆ ವಿಧಿಸಲಾಗಿದೆ ಅಂತ ಜಿಲ್ಲಾಧಿಕಾರಿ ಪಿ. ಸುನಿಲ್‌ ಕುಮಾರ್ ಆದೇಶಿಸಿದ್ದಾರೆ.  ಎರಡು ದಿನ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ರಸ್ತೆಯನ್ನ ಬಂದ್‌ ಮಾಡಿಸಿದ್ದಾರೆ. ವಿದ್ಯಾರ್ಥಿಗಳನ್ನ ಹೊರತುಪಡಿಸಿ ಇತರರಿಗೆ ಪ್ರವೇಶ ನಿಷೇಧಿಸಲಾಗಿದೆ. ಜಿಲ್ಲೆಯ ಇತರೆ ಕಾಲೇಜುಗಳಲ್ಲೂ ಕೂಡ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. ನಿನ್ನೆ 22 ಜಿಲ್ಲೆಗಳ 78 ಕಾಲೇಜುಗಳಲ್ಲಿ ಹಿಜಾಬ್‌ ಸಂಘರ್ಷ ಜೋರಾಗಿತ್ತು. ಜಿಲ್ಲಾಧಿಕಾರಿ, ಎಸ್‌ಪಿ ಮಾತಿಗೂ ವಿದ್ಯಾರ್ಥಿಗಳು ಮಣಿಯುತ್ತಿಲ್ಲ. ಇಂದೂ ಕೂಡ ಹಿಜಾಬ್‌ ಸಂಘರ್ಷ ಜೋರಾಗುವ ಸಾಧ್ಯತೆ ಇರುವುದಿಂದ ಕಠಿಣ ಕ್ರಮಗಳನ್ನ ಕೈಗೊಳ್ಳಲಾಗಿದೆ. 

Hijab Row Vijayapura: ಹಿಜಾಬ್‌ ತೆಗೆಯಲು ನಕಾರ: 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮನೆಗೆ ವಾಪಸ್!